Skip to content

What makes a personality a Caricature?

December 1, 2009



Bull-Dog Manmohan Singh

Indexed Manmohan Singh

Oxford English Dictionary defines caricature, “a picture in which a person’s distinctive features are exaggerated for comic effect.”

Webster’s New World Dictionary & Thesaurus – “a picture or imitation of a person, in which certain features or mannerisms are exaggerated for satirical effect.”

Wikipedia explains, “Caricature can refer to a portrait that exaggerates or distorts the essence of a person or thing to create an easily identifiable visual likeness”. Caricatures can be insulting or complementary and can serve a political purpose or be drawn solely for entertainment.”

The term, caricature is derived from the Italian caricare- to charge or load

Expose not thy self by four-footed manners unto monstrous draughts, and Caricatura representations.

When men faces are drawn with resemblance to other animals, the Italians call it, to be drawn in “caricatura”.

Consider the phraseologies in the three references:
1) “a person’s distinctive features are exaggerated for comic effect”
2) “…imitation of a person, in which certain features or mannerisms are exaggerated for satirical effect”
3) “a portrait that exaggerates or distorts the essence of a person…to create an easily identifiable visual likeness”

In your morning newspapers or in news magazines they carry caricatures drawn out in terms of physical features that were visible in photos of different angles or mannerisms (caricaturists who know or observed the person from very near personally) of personalities exaggerated or distorted. But where were the caricatures in terms of caricatura or “the essence of personality”… very rare.

What about “the essence of person” that may be… the power position follies, vices, stupidities, policy point of views, and strengths& weaknesses… that may be social/cultural, economical or political etc.

Eg: – India’s Vote Against Iran in support of US, a resolution at the IAEA – an article published in Editorial Page of Deccan Herald (dt:01-12-2009), a Bangalore based English daily headlined it as “America’s Doormat”  written by a former diplomat. Even in the middle of the article it was narrated the action of India as “…dhobi work” (washer man work). In this vignette how a caricaturist can depict the prostration business of Indian leadership in a personality caricature is the question of real humor in visual creativity i.e. bringing out “the essence of personality”.

A caricaturist has to consider, while drawing a caricature, not only the physical features and mannerisms of the personality he has to view him/her in all the perspective angles to bring out the critical, complimentary or insulting personified caricature.

ಕನ್ನಡ ಗಣಕೀಕರಣದಲ್ಲಿ ಶಿಷ್ಟತೆ ಮತ್ತು ಏಕರೂಪತೆ: ಕಗಪ ಇಬ್ಬಗೆ ನೀತಿ

December 31, 2015

ಕನ್ನಡ ಲಿಪಿ ಮತ್ತು ಕೀಲಿಮಣೆ ವಿನ್ಯಾಸಗಳಿಗಾಗಿ ಶಿಷ್ಟತೆ ಮತ್ತು ಏಕರೂಪತೆಎಂಬ ಶೀರ್ಷಿಕೆಯಡಿಯಲ್ಲಿ 2014 ಏಪ್ರಿಲ್‌, 17ರ ಗುರುವಾರದಂದು ಪ್ರಕಟಿಸಿದ ಜಾಲಪುಟವನ್ನು ನುಡಿ 5.0” ತಂತ್ರಾಂಶದ ಸಹಾಯ ಪರಿವಿಡಿಯ ವರದಿಗೆ ಜೋಡಿಸಿಡಲಾಗಿದೆ. ಇದನ್ನು ಪರಿಶೀಲಿಸಿದ ನಂತರ ಈ ಒಂದು ಅನಿಸಿಕೆಯನ್ನು ಈ ಬರಹದ ಮೂಲಕ ಕಗಪ ಮುಂದಿಡಬೇಕೆಂದೆನಿಸಿತು.

2014ರ ಏಪ್ರಿಲ್‌ 8ರಂದು ವಿಂಡೋಸ್‌XP ಕಾರ್ಯಾಚರಣ ವ್ಯವಸ್ಥೆ(ಕಾವ್ಯ)ಗೆ ನೀಡುತ್ತಿದ್ದ ಬೆಂಬಲವನ್ನು ಮೈಕ್ರೊಸಾಫ್ಟ್‌ ಸಂಸ್ಥೆ ಹಿಂತೆಗೆದುಕೊಂಡು ಅದರ ಬಳಕೆದಾರರನ್ನು ನಡುನೀರಿನಲ್ಲಿ ಕೈಬಿಟ್ಟಿತು. ಪರಿಣಾಮವಾಗಿ ಈ ಲೇಖಕರು ಲೈನಕ್ಸ್‌ ನ ಓಪನ್‌ಸೂಸಕಾರ್ಯಾಚರಣ ವ್ಯವಸ್ಥೆ(ಕಾವ್ಯ)ಯನ್ನು ಅವರ ಗಣಕಕ್ಕೆ ಅಳವಡಿಸಿಕೊಂಡಿದ್ದಾಯಿತು. ಹಾಗಾಗಿ ನುಡಿ ಐಎಂಇ(ಇನ್ಪುಟ್‌ ಮೆತಡ್‌ ಇಂಜಿನ್‌) ತಂತ್ರಾಂಶ ಗಣಕದ ವಿಂಡೋಸ್‌xp ಕಾವ್ಯ ದೊಂದಿಗೆ ಸತ್ತು ಹೋಯಿತು. ಆದರೆ ಕನ್ನಡದ ಬರವಣಿಗೆಗೇನು ಮಾಡುವುದೆಂದು ತಲೆಕೆಡಿಸಿಕೊಳ್ಳಬೇಕಾಯಿತು.

ಭಾರತ ಸರ್ಕಾರ ಸ್ವಾಮ್ಯದ(ಸಿಡ್ಯಾಕ್‌ ಅಭಿವೃದ್ಧಿ ಪಡಿಸಿರುವ) ಲಿನಕ್ಸ್‌ ಕಾವ್ಯದ ಅರಿವಿದ್ದುದರಿಂದ ಬಾಸ್‌ 4. (ಭಾರತೀಯ ಆಪರೇಟಿಂಗ್‌ ಸಿಸ್ಟಂ ಅಂಡ್‌ ಸಲ್ಯೂಷನ್ಸ್‌)ನ್ನೂ ಸಹ ಗಣಕದಲ್ಲಳವಡಿಸಲಾಯಿತು. ಬಾಸ್‌4ರಲ್ಲಿ ಎಸ್‌ಸಿಐಎಂ(ಸ್ಮಾರ್ಟ್‌ ಕಾಮನ್‌ ಇನ್ಪುಟ್‌ ಮೆತಡ್‌) ಎಂಬ ಒಂದು ವೇಧಿಕೆ ತಂತ್ರಾಂಶವನ್ನು ಭಾರತೀಯ ಭಾಷೆಗಳ ಐಎಂಇ ಗಳಿಗಾಗಿ ಅಳವಡಿಸಲಾಗಿದ್ದಿತು – ಇದೊಂದು ಚೀನಿಯರು ಸೃಷ್ಟಿಸಿದ ತಂತ್ರಾಂಶ. ಇಲ್ಲಿ ಕನ್ನಡಕ್ಕಾಗಿ ಇಟ್ರಾನ್ಸ್, ಈನ್ಸ್‌ಕ್ರಿಪ್ಟ್‌, ಮತ್ತು ಕೆಜಿಪಿ ಎಂಬ ಮೂರು ಕೀಲಿಮಣೆಗಳಿದ್ದವು. ಇದರಲ್ಲಿ ಇಟ್ರಾನ್ಸ್‌ ಮತ್ತು ಈನ್ಸ್‌ಕ್ರಿಪ್ಟ್‌ ಕೀಲಿಮಣೆಗಳು m17n ತಂತ್ರಾಂಶದ .mim ಕಡತ ಕೀಲಿಮಣೆಗಳು – ಇಟ್ರಾನ್ಸ್‌ ಕನ್ನಡದ ಬರಹ ಕೀಲಿಮಣೆಗೆ ಸಮನಾದುದುಪ್ರತಿಯೊಂದು ವ್ಯಂಜನದ ಅಕಾರಕ್ಕಾಗಿ a ಕೀಲಿಸಬೇಕಾಗಿದ್ದುದರಿಂದ ಅದು ಲೇಖಕನಿಗೆ ಇಷ್ಟವಾಗುತ್ತಿರಲಿಲ್ಲ. ಈನ್ಸ್‌ಕ್ರಿಪ್ಟ್‌ ನ್ನು ಯಾರೋ ಕನ್ನಡದ ಗಂಧವಿಲ್ಲದವರು ಬರೆದಿದ್ದಾರೆಯೆಂದೆನಿಸಿತು ಯಾವಯಾವುದೋ ಕೀಲಿಗಳಿಗಳಿಗೆ ಯಾವಯಾವುದೋ ಕನ್ನಡದ ಅಕ್ಷರಗಳನ್ನು ಬರೆದಿದ್ದು ಸುಲಭವಾಗಿ ಕೀಲಿಸಲು ಸಾಧ್ಯವಾಗುತ್ತಿರಲಿಲ್ಲ. ಉಳಿದದ್ದು ಕೆಜಿಪಿ, ರೆಡ್‌ಹ್ಯಾಟ್‌ ಸಂಸ್ಥೆಯ ಜೆನ್ಸ್‌ ಪೀಟರ್‌ಸೆನ್‌ ಎನ್ನುವ ವ್ಯಕ್ತಿ ಸಿದ್ಧಪಡಿಸಿದ್ದಾನೆ. ಅದು ಕೋಷ್ಟಕ(ಟೇಬಲ್‌) ಆಧಾರಿತ .bin ಕಡತ, ಕನ್ನಡದ ನುಡಿ ಕೀಲಿಮಣೆಯಾಧಾರಿತ, ಲೇಖಕ ಸುಲಭವಾಗಿ ಕೀಲಿಸಲು ಇಷ್ಟಪಡುವುದೂ ಅದನ್ನೇ, ಅದರ ಪ್ರಯೋಗವನ್ನೂ ಮಾಡಲಾಯಿತುಒತ್ತಕ್ಷರಗಳನ್ನು ಮಾತ್ರ ತೆಗೆದುಕೊಳ್ಳುತ್ತಿತ್ತು ಗುಣಿತಾಕ್ಷರಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ. ಅದನ್ನು ಲೇಖಕ ಒಂದು .txt ಕಡತದ ಮೂಲಕ ಬಿಚ್ಚಿಡಲಾಗಿ ಗಮನಕ್ಕೆ ಬಂದದ್ದು ಅದಕ್ಕೆ ಗುಣಿತಾಕ್ಷರಗಳನ್ನೇ ಬರೆದಿಲ್ಲದಿರುವುದು! ಪರಿಣಾಮ ಲೇಖಕನಿಂದ ಕೋಷ್ಟಕ(ಟೇಬಲ್‌) ಆಧಾರಿತ ಹೊಸ ಕೀಲಿಮಣೆ ಸೃಷ್ಟಿಶೇ.99 ಭಾಗ ನುಡಿ ಕೀಲಿಮಣೆ ಆಧಾರಮತ್ತದಕ್ಕೆ ಒಂದಷ್ಟು ವಿಸ್ತಾರವನ್ನು ನೀಡಲಾಗಿದೆ ಎಫ಼್ ಕೀಲಿಯನ್ನು ಕೀಲಿಸದೆ ಒತ್ತಕ್ಷರಗಳನ್ನು ಬರೆಯುವ…ಜೊತೆಗೆ ಎಫ಼್ ಕೀಲಿಯ ಅವತಾರವನ್ನೂ ಉಳಿಸಿಕೊಳ್ಳಲಾಗಿದೆ!

ಸಿಡ್ಯಾಕ್‌ ಸಂಸ್ಥೆಯು ೨೦೧೪ ರಲ್ಲಿ ಬಾಸ್‌ ೫. ಅನ್ನು ಬಿಡುಗಡೆ ಮಾಡಿ ಎಸ್‌ಸಿಐಎಂ ಭಾರತೀಯ ಭಾಷೆಗಳಿಗಾಗಿ ಉಳಿಸಿಕೊಂಡಿದ್ದಿತು.

೨೦೧೫ ರಲ್ಲಿ ಬಿಡುಗಡೆಮಾಡಿರುವ ಬಾಸ್‌ ೬.ರಲ್ಲಿ ಐಬಸ್‌(ibus) ಎಂಬ ಬೇರೆ ವೇಧಿಕೆ ತಂತ್ರಾಂಶವನ್ನು ಅಳವಡಿಸಿದೆ. ಆದರೆ ಅದಿನ್ನೂ ಈ ವೇಧಿಕೆ ತಂತ್ರಾಂಶಕ್ಕೆ ಸಿದ್ಧಪಡಿಸಿದ ಭಾರತೀಯ ಭಾಷೆಗಳ ಕೋಷ್ಟಕ(ಟೇಬಲ್‌) ಆಧಾರಿತ ಕೀಲಿಮಣೆಗಳನ್ನು ವ್ಯವಸ್ಥಾತಟ್ಟೆ(ಸಿಸ್ಟಂಟ್ರೇ)ಗೆ ತೆಗೆದುಕೊಳ್ಳುತ್ತಿಲ್ಲ. ಅದನ್ನಿನ್ನೂ ಸಿಡ್ಯಾಕ್‌ ಪೂರ್ಣ ವಿನ್ಯಾಸ(configure)ಮಾಡಿಲ್ಲ. ಅದು ಕೇಳುವ ಹೆಚ್ಚುವರಿ ತಂತ್ರಾಂಶ ಇಳಿಸಲು ಸಿಡ್ಯಾಕ್‌ ಜಾಲತಾಣದಲ್ಲಿ ದೊರಕುವುದಿಲ್ಲ. ಆದಾಗ್ಯೂ ಐಬಸ್‌(ibus) ತೆಗೆದುಹಾಕಿ ಎಸ್‌ಸಿಐಎಂ(scim) ಅನ್ನು ಅಳವಡಿಸಿಕೊಳ್ಳಬಹುದು. ಇದೇ ರೀತಿ ಎಫ಼್‌ಸಿಟಿಕ್ಸ್‌(fcitx) ಎಂಬ ಇನ್ನೊಂದು ವೇಧಿಕೆ ತಂತ್ರಾಶವೂ ಲಭ್ಯವಿರುತ್ತದೆ. ಈ ಎಲ್ಲ ವೇಧಿಕೆ ತಂತ್ರಾಂಶಗಳು ಲೈನಕ್ಸ್‌ ಕಾವ್ಯಗಳಲ್ಲಿ ಕಾರ್ಯನಿರ್ವಹಿಸುತ್ತವೆ. ಮತ್ತು ಲಭ್ಯವಿರುವ ಭಾರತೀಯ ಭಾಷಾ ಏಕರೂಪ(ಯೂನಿಕೋಡ್‌) ಲಿಪಿಗಳಿಗೆ ಸಿದ್ಧಪಡಿಸಿದ m17n ಭಾಷಾ ime(input method engine) ಕೀಲಿಮಣೆಗಳು ದೊರಕುತ್ತವೆ.

ಇಲ್ಲಿ ಮುಕ್ಯವಾಗಿ ಚರ್ಚಿಸಬೇಕಾದ ವಿಷಯ ಶಿಷ್ಟತೆ ಮತ್ತು ಏಕರೂಪತೆ ಬಗ್ಗೆ ಕನ್ನಡದಲ್ಲಿ ಈ ಮೊದಲೇ ಇದ್ದ ಏಕರೂಪ/ಏಕನೀತಿ (ಯೂನಿಕೋಡ್‌) ಲಿಪಿಗಳಲ್ಲಿ ಪರಿಪೂರ್ಣ ಲಿಪಿಯೆಂದರೆ ಲೋಹಿತ್‌ ಕನ್ನಡ ಲಿಪಿ. ಇದರಲ್ಲಿ ಶಾಸ್ತ್ರೀಯ ಕನ್ನಡಕ್ಕೆ ಬೇಕಾದ ಎಲ್ಲ ಗ್ಲಿಫ಼್‌/ಚಿಹ್ನೆಗಳು ಇವೆ. ಉಳಿದವುಗಳಲ್ಲಿಅಂದರೆ ಕೇದಗೆ, ಗುಬ್ಬಿ, ಸಂಪಿಗೆ, ಮಲ್ಲಿಗೆ, ನವಿಲು ಇವುಗಳು ಪರಿಪೂರ್ಣವಾಗಿಲ್ಲ. ವಿಶೇಷ ಗುರುತು/ಚಿಹ್ನೆಗಳಲ್ಲಿ ಹಲವು ಚಿಹ್ನೆಗಳು ಬಿಟ್ಟುಹೋಗಿವೆ. ಇವುಗಳಲ್ಲಿ ಕೇದಗೆ ಮತ್ತು ಗುಬ್ಬಿ ಲಿಪಿಗಳು ಒಂದೇ ರೀತಿಯಲ್ಲಿದ್ದು ಬೇರೆಬೇರೆ ಹೆಸರಿನಲ್ಲಿ ಬೇರೆಬೇರೆ ರಚನಕಾರರ ಹೆಸರಿನಲ್ಲಿ ರಚಿತವಾಗಿವೆ. ಹಾಗೆಯೇ ನವಿಲು ಮತ್ತು ಮಲ್ಲಿಗೆ ಲಿಪಿಗಳು. ಸಂಪಿಗೆ ಲಿಪಿ ಮಾತ್ರ ಭಿನ್ನವಾಗಿದೆ. ಲೋಹಿತ್‌ ಕನ್ನಡ ಲಿಪಿಯನ್ನು ರೆಡ್‌ಹ್ಯಾಟ್‌ ಲಿನಕ್ಸ್‌ ಸಂಸ್ಥೆ ರಚಿಸಿದ್ದರೆ ಉಳಿದೈದು ಲಿಪಿಗಳನ್ನು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಕರ್ನಾಟಕ ಸರ್ಕಾರದ ಪ್ರಾಯೋಜತ್ವದಲ್ಲಿ ರಚಿಸಿದೆ. ಇನ್ನುಳಿದಂತೆ ದೊರಕುತ್ತಿದ್ದ ಏಕರೂಪ/ಏಕನೀತಿ ಲಿಪಿಗಳೆಂದರೆ ಆರಿಯಲ್‌ ಯೂನಿಕೋಡ್‌ ಎಂಎಸ್‌ ಎಂಬ ಬಹುಭಾಷಾ ಲಿಪಿ ಮತ್ತು ತುಂಗಾ. ಈ ಎರಡು ಲಿಪಿಗಳೂ ಖಾಸಗಿ ಮಾಲೀಕತ್ವದ ಮೈಕ್ರೊಸಾಫ಼್ಟ್ ಸಂಸ್ಥೆಯ ಒಡೆತನಕ್ಕೆ ಸೇರಿವೆ. ವಿಂಡೋಸ್‌ ಕಾವ್ಯ ತಂತ್ರಾಂಶದಲ್ಲಿ ಮಾತ್ರವೇ ಬಳಸಬಹುದಾದಂತಹವು. ಲೈನಕ್ಸ್‌ ತಂತ್ರಾಂಶಗಳಲ್ಲಿ ಅಳವಡಿಸಿಕೊಂಡರೆ ಕಾನೂನು ಬಾಹಿರವಾಗಬಹುದು?! ಆದರೆ ಎರಡೂ ಅಪರಿಪೂರ್ಣ ಲಿಪಿಗಳುಶಾಸ್ತ್ರೀಯ ಕನ್ನಡ ಬಳಕೆಗೆ ಯೋಗ್ಯವಾಗಿಲ್ಲ. ಶಿಷ್ಟತೆ ಮತ್ತು ಏಕರೂಪತೆ ಎಂಬುದು ವಿಂಡೋಸ್‌ ಕಾವ್ಯ ತಂತ್ರಾಂಶಕ್ಕೆ ಈಗಾಗಲೇ ಸಿದ್ಧಪಡಿಸಿರುವ ನುಡಿ, ಬರಹ, ಶ್ರೀಲಿಪಿ, ಎಸ್‌ಆರ್‌ಜಿ, ಅನು, ಸುರಭಿ ಮತ್ತು ಪ್ರಕಾಶಕ್‌ ತಮ್ಮದೇ ಆದ ಲಿಪಿಗಳ ಆಧಾರಿತ ತಂತ್ರಾಂಶಗಳು. ಏಕಂದರೆ ಇವುಗಳ ಒಂದರ ಲಿಪಿ ಇನ್ನೊಂದರ ತಂತ್ರಾಂಶದಲ್ಲಿ ಕಾರ್ಯವಹಿಸುವುದಿಲ್ಲ. ಆದರೆ ಪದ ಎಂಬ ತಂತ್ರಾಂಶ ಮಾತ್ರ ತನ್ನದೇ ಆದ ಲಿಪಿಗಳನ್ನು ಬರೆದುಕೊಂಡಿಲ್ಲಅದು ಲಭ್ಯವಿರುವ ಏಕರೂಪ ಲಿಪಿಗಳನ್ನು ಮಾತ್ರವೇ ಬಳಸಿಕೊಳ್ಳುತ್ತದೆ, ಲೇಖಕನ ಗಣಕದಲ್ಲಿ ತುಂಗಾ ಲಿಪಿ ಪೂರ್ವನಿಯೋಜಿತ(ಡಿಫಾ಼ಲ್ಟ್‌) ಲಿಪಿಯಾಗಿ ಕೂರುತ್ತದೆ. ಈ ತಂತ್ರಾಂಶ ಶಿಷ್ಟತೆ ಮತ್ತು ಏಕರೂಪತೆ ಬದ್ಧತೆಯನ್ನು ಅನುಸರಿಸಿದೆಯೆಂದರೆ ಅತಿಶಯೋಕ್ತಿಯಲ್ಲ. ಅದಕ್ಕೆ ಈ ನೀತಿ ಬೇಕಿಲ್ಲ.

ಲಭ್ಯವಿರುವ ನೂತನ ಕನ್ನಡ ಏಕರೂಪ/ಏಕನೀತಿ(ಯೂನಿಕೋಡ್‌) ಲಿಪಿಗಳು:

ಮೇಲೆ ತಿಳಿಸಿದ ಏಕರೂಪ ಲಿಪಿಗಳ ಹೊರತಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡದ ಸಾಹಿತಿಗಳ ಹೆಸರಿನಲ್ಲಿ ಬರೆಸಿರುವ  ಕರ್‌<ಸಾಹಿತಿ>.ttf (<ಸಾಹಿತಿಯ ಹೆಸರು>) ಹನ್ನೆರಡು ನೂತನವಾದ ವಿಭಿನ್ನ ಲಿಪಿಗಳು ಬಂದಿವೆ, ಇದರಲ್ಲಿ ಯುಆರ್‌ ಅನಂತಮೂರ್ತಿ ಲಿಪಿ ಸರಿಯಾಗಿ ಕಾರ್ಯನಿರ್ವವಹಿಸುವುದಿಲ್ಲ, ಉಳಿದ ಹನ್ನೊಂದು ಲಿಪಿಗಳು ಕಾರ್ಯವಹಿಸಿದರೂ ಕೆಲವು ಲಿಪಿಗಳು ಎರಡು ಅಥವಾ ಮೂರು ಒತ್ತಕ್ಷರಗಳನ್ನು ನೀಡಿದಾಗ ಲಂಬತಳದಲ್ಲಿ ತೆಗೆದುಕೊಳ್ಳುವುದರಿಂದ ಪುಟದ ಕೆಳಸಾಲು ಮತ್ತಷ್ಟು ಕೆಳಕ್ಕೆ ತಳ್ಳಲ್ಪಡುತ್ತದೆ ಸಾಲುಗಳ ಅಂತರ ಹೆಚ್ಚೆನಿಸುತ್ತದೆ. ಅಕ್ಷರಗಳ ಗ್ಲಿಫ಼್‌ಗಳನ್ನು ಅವುಗಳ ಸಂಕೇತ ಸ್ಥಾನಗಳಲ್ಲಿ ಕೂರಿಸಿ ಸಮಂಜಸ ಹೊಂದಾಣಿಕೆ ಸ್ಥಳಾವಕಾಶ ಮಾಡುವಲ್ಲಿ ಲಿಪಿ ನಿರ್ಮಾಪಕರು ವಿಫಲರಾಗಿದ್ದಾರೆ. ಶಾಸ್ತ್ರೀಯ ಕನ್ನಡದಲ್ಲಿ ಪು ಅಕ್ಷರಕ್ಕೆ ಕೆಳಗಿನಿಂದ ಕೊಂಬು ಪು ಹೀಗೆ ನೀಡುವುದಾಗಿದ್ದಿತುಶಾಲೆಯಲ್ಲಿ ಲೇಖಕರು ಕಲಿತದ್ದೂ ಹಾಗೆಯೇ. ಆದರೆ ಶಿಷ್ಟತೆ ಮತ್ತು ಏಕರೂಪತೆ ಪಾಠ ಹೇಳುತ್ತಿರುವ ಕಗಪ ತನ್ನ ನುಡಿ ತಂತ್ರಾಂಶದಲ್ಲಿ ಹಾಗೆಯೇ ಪು ಮುಂದುವರಿಸಿದೆ. ನುಡಿ ೫.೦ ತಂತ್ರಾಂಶದ ಜೊತೆಯಲ್ಲಿ ಹಳೆಯ ನುಡಿ ಲಿಪಿಗಳ ಜೊತೆಗೆ ಹತ್ತು ಜೋಡಿಗಳ ವಿಭಿನ್ನ ಏಕನೀತಿ/ಏಕರೂಪ(ಯೂನಿಕೋಡ್‌) ಲಿಪಿಗಳನ್ನು ಮತ್ತು ಒಂದು ಪ್ರತ್ಯೇಕ ಇಂಚರ.ttf ಲಿಪಿಯನ್ನೂ ನೀಡಿದೆ. ಈ ಎಲ್ಲ ಲಿಪಿಗಳಲ್ಲಿಯೂ ಅದೇ ಪು ಚಾಳಿಯನ್ನುಳಿಸಿದೆ. ಲೋಹಿತ್‌ ಕನ್ನಡ, ಕೇದಗೆ, ಗುಬ್ಬಿ, ಸಂಪಿಗೆ, ಮಲ್ಲಿಗೆ, ನವಿಲು, ಆರಿಯಲ್‌ ಯೂನಿಕೋಡ್‌ ಎಂಎಸ್‌, ಮತ್ತು ತುಂಗಾ ಲಿಪಿಗಳು ಸರಿಯಾದ ಶಾಸ್ತ್ರೀಯ ಪು ಆಕ್ಷರವನ್ನು ಕೊಡುತ್ತವೆ. ಕಗಪ ಎಲ್ಲರಿಗೂ ಪಾಠ ಹೇಳುವ ಮೊದಲು ತನ್ನನ್ನು ತಾನು ಸರಿಪಡಿಸಿಕೊಳ್ಳುವುದೊಳ್ಳೆಯದು. ಜೊತೆಗೆ ಈ ಜೋಡಿ ಹತ್ತು ಲಿಪಿಗಳ ಬದಲಿಗೆ ಇನ್ನೂ ಹತ್ತು ಭಿನ್ನತೆಯ ಲಿಪಿ ಬರೆಯಬಹುದಿತ್ತು. ಒಂದೇ ರೀತಿಯ ಎರಡು ಪ್ರತ್ಯೇಕ ಲಿಪಿಗಳೇಕೆ? ಏನು ವ್ಯತ್ಯಾಸ..? ಕನ್ನಡ ಮತ್ತು ಆಂಗ್ಲ ಅಂಕಿಗಳಿಗಾಗಿ ಈ ಪ್ರತ್ಯೇಕತೆ ಮಾತ್ರ. ಕನ್ನಡ ಅಂಕಿಗಳಿಗಾಗಿ ಲಿಪಿ ಸಂಕೇತ ಚೌಕುಟ್ಟುಗಳನ್ನು ನಿರ್ಧರಿಸಿದ್ದಾಗ್ಯೂ ಆಂಗ್ಲ ಅಂಕಿಗಳಿಗೆ ನೀಡಿರುವ ಸಂಕೇತ ಚೌಕಟ್ಟುಗಳಲ್ಲೂ ಕನ್ನಡ ಅಂಕಿಗಳ ಗ್ಲಿಫ಼್‌ಗಳನ್ನು ತುಂಬಲಾಗಿದೆ. ಈ ಕಾರಣಕ್ಕಾಗಿ ಒಂದೇ ರೀತಿಯ ಎರೆಡೆರೆಡು ಲಿಪಿಗಳು.

ತನ್ನ ಪ್ರತಿಷ್ಠೆಯ ತಂತ್ರಾಂಶನುಡಿ ಎಂಬ ಆಲದಮರಕ್ಕೆ ನೇತಾಡುತ್ತಿರುವ ಕಗಪ ತನ್ನ ಇಸ್ಕಿ ಲಿಪಿಗಳಿಗೆ ಅಂಟಿಕೊಂಡಿರುವುದು ಶತಸಿದ್ಧವಾಗಿದೆ. ಇಸ್ಕಿ ಲಿಪಿಗಳ ಏಕರೂಪ ಲಿಪಿಪರಿವರ್ತನೆಗಾಗಿ ಮತ್ತೊಂದು ಪರಿವರ್ತನಾ ತಂತ್ರಾಶವನ್ನು ಸೃಷ್ಟಿ ಮಾಡಿದೆ. ಪರಿವರ್ತನಾ ಏಕರೂಪ ಕಡತಗಳನ್ನು ಸೃಷ್ಟಿಸಲು ತಗಲುವ ಸಮಯ ಮತ್ತು ಕೆಲಸದ ಅಗಾಧತೆಯನ್ನು ಪರಿಗಣಿಸಿದರೆ ಕಗಪ ತನ್ನ ನುಡಿ ತಂತ್ರಾಂಶದ ನೇರನುಡಿ ಏಕರೂಪ(ಯೂನಿಕೋಡ್‌ ಆಪ್ಚನ್‌)ವನ್ನುಳಿಸಿಕೊಂಡು ಇಸ್ಕಿ ಲಿಪಿ ಆಧಾರಿತ ನೇರನುಡಿಯನ್ನು ಕೊಲ್ಲುವುದೊಳ್ಳೆಯದು. ಆಗ ಈ ಪರಿವರ್ತನೆಯೆಂಬ ಕೆಲಸದ ಸಮಯ ಉಳಿತಾಯವಾಗುತ್ತದೆ.

ಇಸ್ಕಿ ಲಿಪಿಗಳು ನುಡಿ ತಂತ್ರಾಂಶವನ್ನು ಹೊರತು ಬೇರಾವ ತಂತ್ರಾಂಶದಲ್ಲೂ ಕಾರ್ಯನಿರ್ವಹಿಸುವುದಿಲ್ಲ. ನೇರವಾಗಿ ಬಳಸಿದರೆ ಪದಸಂಸ್ಕರಣ(ಎಂಎಸ್‌ ವರ್ಡ್‌/ ಲಿಬರ್‌ಆಫೀ಼ಸ್‌ ಯಾ ಒಪನ್‌ ಅಫೀ಼ಸ್‌) ಪುಟಗಳಲ್ಲಿ, .ಟಿಎಕ್ಸ್‌ಟಿ(.txt) ಕಡತಗಳಲ್ಲಿ ಮತ್ತು ಜಾಲಪುಟಗಳಲ್ಲಿ ಕನ್ನಡದ ಅಪೂರ್ಣ ಅಕ್ಷರಗಳನ್ನು ಅಥವಾ ವಿಚಿತ್ರ ಲ್ಯಾಟಿನ್‌ ಅಕ್ಷರಗಳನ್ನು ಬರೆದು ವಿರೋಧಾಭಾಸಗಳಿಗೆ ಕಾರಣವಾಗುತ್ತಿದೆ. ಇದಾವ ಪುರುಷಾರ್ಥಕ್ಕೆ? ಅದೇರೀತಿ ಬರಹ, ಶ್ರೀಲಿಪಿ, ಎಸ್‌ಆರ್‌ಜಿ, ಅನು, ಸುರಭಿ ಮತ್ತು ಪ್ರಕಾಶಕ್‌ ತಂತ್ರಾಂಶದ ಲಿಪಿಗಳು ಆಯಾ ತಂತ್ರಾಂಶಗಳನ್ನು ಹೊರತು ಬೇರಾವ ತಂತ್ರಾಂಶದಲ್ಲೂ ಕಾರ್ಯವಹಿಸುವುದಿಲ್ಲ.

ಇದೀಗ ಈ ನುಡಿ ಐಎಂಇ(ಇನ್ಪುಟ್‌ ಮೆತಡ್‌ ಇಂಜಿನ್‌) ಅನ್ನು ಲಿನಕ್ಸ್‌ ಕಾರ್ಯಾಚರಣ ವ್ಯವಸ್ಥೆ ತಂತ್ರಾಂಶಗಗಳಿಗೂ ಸಿದ್ಧಪಡಿಸುವುದಾಗಿ ಅದರ ವರದಿಯಲ್ಲಿ ತಿಳಿಸಿದೆ. ಈ ಲೇಖಕ ಈಗಾಗಲೇ ನುಡಿ ೫.೦ ತಂತ್ರಾಂಶವನ್ನು ಓಪನ್‌ಸೂಸ ೪೨. ಲಿನಕ್ಸ್‌ ಕಾರ್ಯಾಚರಣ ವ್ಯವಸ್ಥೆ ಯಲ್ಲಿ ಅಳವಡಿಸಿಕೊಂಡಿದ್ದಾರೆ. ನುಡಿ೫.೦ರ ಪದಸ್ಕರಣ ಪುಟದಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ. ಲಿಬರ್‌ಆಫೀ಼ಸ್‌ ಪದಸಂಸ್ಕರಣ ಪುಟದಲ್ಲಿ ನೇರನುಡಿ ಕೆಲಸಮಾಡುವುದಿಲ್ಲ. ಲಿನಕ್ಸನಲ್ಲಿ ನುಡಿಯ ಇಸ್ಕಿ ಲಿಪಿಗಳು ಕೆಲಸಕ್ಕೆ ಬಾರದ ಲಿಪಿಗಳು. ಒಂದು ಸಹಾಯವೆಂದರೆ ಇಸ್ಕಿ ನುಡಿಲಿಪಿಗಳಲ್ಲಿ ತಯಾರಿಸಿದ ಕಡತಗಳಿದ್ದರೆ ಓದಲು ಸಹಾಯಮಾಡುತ್ತವೆ. ಇಲ್ಲದಿದ್ದಲ್ಲಿ ಲ್ಯಾಟಿನ್‌ ಲಿಪಿಗಳು ಪ್ರತ್ಯಕ್ಷವಾಗುತ್ತವೆ ಅಥವಾ ಖಾಲಿ ಚೌಕಟ್ಟುಗಳು ಮೂಡುತ್ತವೆ.

ಈಗಾಗಲೇ scim, fcitx ಗಳು ಹಳತಾಗಿದ್ದರೆ ibus ವೇಧಿಕೆತಂತ್ರಾಂಶವನ್ನು ಬಹು ಶಕ್ತಿಯುತ(ಡೈನಮಿಕ್‌) ಐಎಂಇ ರೂಪಕ ಎಂದು ಲಿನಕ್ಸ್‌ ಬಳಕೆದಾರರು ಪರಿಗಣಿಸಿರುವುದರಿಂದ ಅದು ಜಾಗತಿಕವಾಗಿ ಮೇಲ್ಸ್ತರದಲ್ಲಿದೆ ಅದಕ್ಕೆ ಕನ್ನಡದ ಐಎಂಇ ಕೀಲಿಮಣೆಗಳನ್ನು ಸಿದ್ಧಪಡಿಸಬಹುದು. ಬೇಕಾಗಿರುವುದು ಆಸ್ಕಿ ಆಧಾರಿತ ಏಕರೂಪ(ಯೂನಿಕೋಡ್‌) ಲಿಪಿಗಳು ಮಾತ್ರ. ಚೀನಾ, ಕೊರಿಯ, ಜಪಾನ್‌, ವಿಯಟ್ನಾಂ, ಥೈಲ್ಯಾಂಡ್‌ ಮತ್ತಿತರ ಏಷಿಯಾ ದೇಶಗಳೆಲ್ಲ ಈ ತಂತ್ರಾಂಶವನ್ನು ಈಗಾಗಲೇ ಬಳಸುತ್ತಿವೆ ಮತ್ತು ಬದ್ಧವಾಗಿವೆ. ಹಾಗೂ ತಂತ್ರಾಂಶಗಳು ಜಾಗತಿಕವಾಗಿ ಮಂಚೂಣಿಯಲ್ಲಿವೆ. ವಿಶೇಷವೆಂದರೆ ಈ ತಂತ್ರಾಂಶಗಳು ವಿಂಡೋಸ್‌ ಕಾವ್ಯದಲ್ಲಿ ಕಾರ್ಯವಹಿಸುವುದಿಲ್ಲ ಮತ್ತು ಅಳವಡಿಸಲಾಗುವುದಿಲ್ಲ. ಹೀಗಿರುವಾಗ್ಗೆ ಶಿಷ್ಟತೆ ಮತ್ತು ಏಕರೂಪತೆ ಬಗ್ಗೆ ನೇಮಕವಾದ ಸಮಿತಿಯು ನೀಡಿರುವ ೧ – ೪ ರವರೆಗಿನ ಶಿಪಾರಸ್ಸುಗಳು ಹಾಸ್ಯಾಸ್ಪದ. ಏಕೆಂದರೆ ಸಮಿತಿ ಕೇವಲ ವ್ಯಾಪರೀ ಮನೋಭಾವದ ಮೈಕ್ರೋಸಾಫ಼್ಟ್‌ ಸಂಸ್ಥೆಯ ವಿಂಡೋಸ್‌ ಆಧಾರಿತ ಐಎಂಇ ಗಳಿಗೆ ಮಾತ್ರ ಅನ್ವಯಿಸಿ ಈ ಮಾತು ಹೇಳಿದಂತಿದೆ. ಜೊತೆಗೆ ಸರ್ಕಾರಗಳೇಕೆ ಇನ್ನೂ ತನ್ನ ಗಣಕಗಳಿಗೆ ವಿಂಡೋಸ್‌ ಕಾವ್ಯ ತಂತ್ರಾಶವನ್ನೇ ಅವಲಂಬಿಸದೆಯೆಂಬು ಅರ್ಥವಾಗುವುದಿಲ್ಲಸಿಡ್ಯಾಕ್‌ ಸಂಸ್ಥೆ ಬಾಸ್‌ ಲೈನಕ್ಸ್‌ ಕಾವ್ಯ(ಕಾರ್ಯಾಚರಣ ವ್ಯವಸ್ಥೆ) ಅಳವಡಿಸಿಕೊಳ್ಳಲು ಎಲ್ಲ ರಾಜ್ಯ ಸರ್ಕಾರಗಳಿಗೂ ಗೋಗರೆದು ಮನವಿ ಮಾಡುತ್ತಿದ್ದಾಗ್ಯೂ?!

ಶಿಪಾರಸ್ಸುಗಳ ಇಬ್ಬಗೆ ನೀತಿ ಮತ್ತು ಪ್ರಕಟಣಾ ಪ್ರಪಂಚಕ್ಕೆ ಆಗುವ ಪರಿಣಾಮ

ಕನ್ನಡ ಲಿಪಿ ತಂತ್ರಾಂಶಗಳಲ್ಲಿ ಈಗಾಗಲೇ ಇರುವ ಮಿತಿಯನ್ನು ಹೊಸ ಸಂಕೇತಗಳಿಗೆ (ಶಿಷ್ಟ ಮತ್ತು ಏಕರೂಪ) ಅನ್ವಯಿಸುವ ಅಕ್ಷರ ರೂಪಗಳಿಗೆ ಬದಲಿಸಲು ಅನುಕೂಲವಾಗುವಂತೆ ಬದಲಾವಣೆ ಸಾಧ್ಯತೆ ಅನುಕೂಲತೆಗಳನ್ನು (ಕನ್ವರ್ಷನ್ ಯುಟಿಲಿಟಿ) ನೀಡಬೇಕುಎಂಬ ಶಿಪಾರಸ್ಸನ್ನು ಗಮನಿಸಿದರೆ ಲ್ಯಾಟಿನ್‌ ಸಂಖೇತಕ್ಕೊಳಪಡಿಸಿದ ಇಸ್ಕಿಯ ನುಡಿ ಲಿಪಿಗಳನ್ನು ಮೊದಲು ನಿರ್ನಾಮಮಾಡುವುದರಿಂದ ಸಮಸ್ಯೆ ಬಗೆ ಹರಿಯುತ್ತದೆ ಎನ್ನಬಹುದು. ಈ ನೀತಿಯನ್ನು ಅನುಷ್ಟಾನಗೊಳಿಸಿದಲ್ಲಿ ನುಡಿಯೂ ಸೇರಿ ಹಲವು ಖಾಸಗಿ ಕಂಪನಿಗಳು ಕನ್ನಡ ಪ್ರಕಟಣಾ ಪ್ರಪಂಚಕ್ಕೆ ಬರೆದುಕೊಟ್ಟಿರುವ ಲಿಪಿಯಾಧಾರಿತ ಐಎಂಇ ತಂತ್ರಾಶಗಳು ಸಹಜವಾಗಿ ನಶಿಸುತ್ತವೆ. ಉದಾ: ಶ್ರೀಲಿಪಿ, ಬರಹ, ನುಡಿ, ಎಸ್‌ಆರ್‌ಜಿ, ಅನು, ಸುರಭಿ, ಪ್ರಕಾಶಕ್‌ ಮತ್ತು ಕನ್ನಡ ವಿಶ್ವವಿದ್ಯಾಲಯದ ಕುವೆಂಪು ಇತ್ಯಾದಿತಂತ್ರಾಂಶಗಳು ಮತ್ತವುಗಳಿಗೆ ಸಂಬಂಧಿಸಿದ ಲಿಪಿಗಳು. ಕನ್ನಡದ ಪ್ರಕಟಣಾ ಪ್ರಪಂಚಕ್ಕೆ ಮತ್ತು ಮುದ್ರಣಾಲಯಗಳಿಗೆ ಸ್ವಲ್ಪಮಟ್ಟಿನ ಧಕ್ಕೆಯಾಗಬಹುದು. ಒಂದು ಸಮಾಧಾನವೆಂದರೆ ಕುವೆಂಪು ತಂತ್ರಾಂಶ ಬದಲಾವಣೆ ಸಾಧ್ಯತೆ (ಕನ್ವರ್ಷನ್ ಯುಟಿಲಿಟಿ) ಅನುಕೂಲತೆಗಳನ್ನೂ ಒದಗಿಸಿದೆ. ಆದರೆ ಬಾಸ್‌ ಲೈನಕ್ಸ್‌ ಕಾವ್ಯವನ್ನು ಗಣಕಗಳಿಗೆ ಅಳವಡಿಸಿದರೆ ಈ ಹೊಸ ಕನ್ನಡದ ಇಸ್ಕಿ ಲಿಪಿ ಆಧಾರಿತ ಐಎಂಇಗಳಿಗೆ ಅವಶ್ಯವಾಗಿ ಹಣ ಸುರಿಯುವುದನ್ನು ತಪ್ಪಿಸಬಹುದಾಗಿತ್ತು. ಕೇವಲ ಸಾಕಷ್ಟು ಏಕರೂಪ(ಯೂನಿಕೋಡ್‌) ಲಿಪಿಗಳನ್ನು ಅಭಿವೃದ್ಧಿ ಪಡಿಸಿದ್ದರೆ ಸಾಕಿತ್ತು. ಇನ್ನೊಂದು ಅನುಮಾನಾಸ್ಪದ ವಿಷಯವೆಂದರೆ ಕರ್ನಾಟಕ ಸರ್ಕಾರವಾಗಲೀ ಅಥವಾ ಕನ್ನಡ ವಿಶ್ವವಿದ್ಯಾಲಯವಾಗಲೀ ಏಕೆ ಈ ಬಹುರಾಷ್ಟ್ರೀಯ ಸಂಸ್ಥೆಯ ವಿಂಡೋಸ್‌ ಕಾವ್ಯ ವನ್ನೇ ಅವಲಂಭಿಸಿವೆಯೆನ್ನುವುದು?!

ವರದಿ ವಿವರಣೆಯ ೬ನ್ನು ಗಮನಿಸಿ…”, , , ಬ ಅಕ್ಷರಗಳಿಂದ ಢ, , , ಭ ಅಕ್ಷರಗಳನ್ನು ಪಡೆಯಲು ಹೊಕ್ಕಳ ಸೀಳು ಚಿಹ್ನೆಯನ್ನು ಸಂಕೇತ 115 ರಲ್ಲಿ ನೀಡಿರುವಂತೆ, ಡಿ, ದಿ, ಪಿ, ಬಿ ಅಕ್ಷರಗಳಿಂದ ಢಿ, ಧಿ, ಫಿ, ಭಿ ಅಕ್ಷರಗಳನ್ನು ಪಡೆಯಲು ಸಂಕೇತ 252 ರಲ್ಲಿ ಮತ್ತೊಂದು ಹೊಕ್ಕಳ ಸೀಳು ಚಿಹ್ನೆಯನ್ನು ನೀಡಲಾಗಿದೆ” ಈ ವಿವರಣೆ ಇಸ್ಕಿ ಸಂಕೇತ ಕುರಿತು ನೀಡಿರುವುದಾಗಿದೆ. ಕಾರಣ ನುಡಿ ಐಎಂಇ ತಂತ್ರಾಂಶವನ್ನು ನೇರವಾಗಿ ನುಡಿ ಇಸ್ಕಿ ಲಿಪಿಗಳಿಗೆ ಕೊಂಡಿ ಹಾಕಿ ಬರೆಯಲಾಗಿದೆ. ಈ ಸಂಕೇತಗಳು ಕೂಡ ಲ್ಯಾಟಿನ್‌ ಲಿಪಿ ಸಂಕೇತಗಳಿಗೆ ನೀಡಿದ ಚೌಕಟ್ಟುಗಳ ಧುರ್ಬಳಕೆಯಾಗಿದೆ. ಆದುದರಿಂದ ಶಿಷ್ಟತೆಏಕರೂಪತೆ ಸರ್ಕಾರದಿಂದಲೇ ಪ್ರಾರಂಬವಾಗಬೇಕು.

ಆ ಕಾರಣಕ್ಕಾಗಿಯೇ ಕಗಪದ ಹತ್ತು ಜೋಡಿ ಮತ್ತು ಇಂಚರ.ttf ಏಕರೂಪ ಲಿಪಿಗಳುಹಾಗೆಯೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹನ್ನೆರಡು ಏಕರೂಪ ಲಿಪಿಗಳು ಹೊರಬಂದಿರಬಹುದು. ಇನ್ನು ಇಸ್ಕಿಯನ್ನು ಪರಿಸಮಾಪ್ತಿ ಮಾಡುವುದೊಂದು ಬಾಕಿಯಿದೆ.

ಈ ಬರಹವನ್ನು ಕನ್ನಡದ ಏಕರೂಪ ಲಿಪಿ NudiUni01e.ttf ಅನ್ನು ಬಳಸಿ ಲಿಬರ್‌ಆಫೀ಼ಸ್‌ ಪದಸಂಸ್ಕರಣ ಪುಟದ ಮೇಲೆ ಬರೆದು ಎಂಎಸ್‌ ವರ್ಡ್‌.doc ಕಡತ ರೂಪದಲ್ಲಿ ಉಳಿಸಲಾಗಿದೆ. ಉಪಯೋಗಿಸಿದ ಐಎಂಇ ನುಡಿನಲ್ನುಡಿಕನ್ನಡ.(ಲೇಖಕರೇ ಎಸ್‌ಸಿಐಎಂ ತಂತ್ರಾಂಶಕ್ಕಾಗಿ ಸಿದ್ಧಪಡಿಸಿದ್ದು). ಬಳಸಿದ ಐಎಂಇ ಕನ್ನಡ ಅಂಕಿಗಳಿಗಾಗಿದ್ದುದು. ಲಿಪಿಯಲ್ಲಿ ಇಂಗ್ಲೀಷ್‌ ಮತ್ತು ಕನ್ನಡ ಅಂಕಿಗಳ ಎರಡೂ ಸಂಕೇತ ಚೌಕಟ್ಟುಗಳಲ್ಲಿ ಇಂಗ್ಲೀಷ್ ಅಂಕಿಗಳನ್ನೇ ತುಂಬಿರುವುದರಿಂದ ಬರಹದಲ್ಲಿ ಇಂಗ್ಲೀಷ್‌ ಅಂಕಿಗಳೇ ಮೂಡಿದೆ. ಲೋಹಿತ್‌ ಕನ್ನಡ, ಕೇದಗೆ, ಗುಬ್ಬಿ, ಸಂಪಿಗೆ, ಮಲ್ಲಿಗೆ ಮತ್ತು ನವಿಲು ಲಿಪಿಗಳಲ್ಲಿ ಈ ಸಮಸ್ಯೆಯಿಲ್ಲ. ಅಲ್ಲಿ ಆಯಾ ಸಂಕೇತ ಸ್ಥಾನಗಳಲ್ಲಿ ಆಯಾ ಅಂಕಿಗಳೇ ತುಂಬಿವೆ. ಅಂದರೆ ಕಗಪ ಅದರ ಇಸ್ಕಿ ಲಿಪಿಗಳ ಇಬ್ಬಗೆ ಭ್ರಮೆಯಿಂದ ಹೊರಬಂದಿಲ್ಲ ಎನ್ನುವುದನ್ನಿದು ಸ್ಪಷ್ಟವಾಗಿ ಸೂಚಿಸುತ್ತದೆ. ಈ ಏಕರೂಪ ಲಿಪಿಗಳನ್ನು ಕಗಪ ನುಡಿ ತಂತ್ರಾಂಶಕ್ಕಾಗಿಯೇ ಬರೆಸಿದಂತಿದೆ. ಜಾಗತಿಕ ಉಪಯೋಗಕ್ಕಾಗಿ ಅಲ್ಲವೆಂಬುದು ಇದರಿಂದ ಇನ್ನಷ್ಟು ಸುಸ್ಪಷ್ಟ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಸ್ತುತ ಪಡಿಸಿರುವ ಕರ್ <ಸಾಹಿತಿ>.ttf ಲಿಪಿಗಳಲ್ಲಿ ಈ ಇಬ್ಬಗೆ ವ್ಯಕ್ತವಾಗಿಲ್ಲಜಾಗತಿಕ ಉಪಯೋಗಕ್ಕೆ ಸೂಕ್ತವಾಗಿವೆ.

ಲಿಪ್ಯಂತೀಕರಣದ ಆಭಾಸಗಳು

ಲಿಪ್ಯಂತೀಕರಣದಲ್ಲಿ ಇಂಗ್ಲೀಷ್‌ ಪದಗಳನ್ನು ಕನ್ನಡದಲ್ಲಿ ಯಥಾವತ್ತಾಗಿ ಶಬ್ದ ಹೊರಡಿಸಿ ಬರೆಯಲು ಹಲವು ತೊಡಕುಗಳಿವೆ. ಇದಕ್ಕಾಗಿಯೇ ಸೃಷ್ಟಿಸಿದ ಕೀಲಿಮಣೆ ಇಟ್ರಾನ್ಸ್‌(itrans), ಕನ್ನಡದ ಬರಹ (ಫೊ಼ನಿಟಿಕ್‌)ಕೀಲಿಮಣೆ ಇದೇ ಆಧಾರಿತ. ಇರುವ ತೊಡಕೆಂದರೆ ಮುಖ್ಯವಾಗಿ ಇಂಗ್ಲೀಷ್‌ನ ಎರಡು ಅಕ್ಷರಗಳು/ಶಬ್ದಗಳು…f/ph ಮತ್ತು z. ಇವುಗಳಿಗೆ ಸಮಾಂತರ ಶಬ್ದಾಕ್ಷರಗಳು ಕನ್ನಡದಲ್ಲಿಲ್ಲ. ಮಹಾಪ್ರಾಣ ವನ್ನು f/phಗೆ ಬದಲಾಗಿ, ಮತ್ತು /// ಗಳನ್ನು z ಶಬ್ದದ ಬದಲಾಗಿ ಕನ್ನಡದಲ್ಲಿ ಬರೆಯಲಾಗುತ್ತಿದೆ. ಅನುಕ್ರಮವಾಗಿ ಈ ಕನ್ನಡದ ಶಬ್ದಗಳು ಇಂಗ್ಲೀಷ್‌ನ f/ph ಮತ್ತು z ಶಬ್ದಗಳಿಗೆ ಸಮನಾಗುವುದಿಲ್ಲ. ಮೈಸೂರು ವಿಶ್ವವಿದ್ಯಾಲಯದ ಇಂಗ್ಲೀಷ್‌ಕನ್ನಡ ನಿಘಂಟನ್ನು ಪರಿಶೀಲಿಸುವ ಲೇಖಕನಿಗೆ ತಪ್ಪುಚ್ಚಾರಣೆ ಬರೆಯುತ್ತಿದ್ದೇನೆಂಬ ಅಸಮಧಾನ ಕಾಡುತ್ತದೆ. ಕೇದಗೆ, ಗುಬ್ಬಿ, ಮಲ್ಲಿಗೆ ಸಂಪಿಗೆ ಮತ್ತು ನವಿಲು ಲಿಪಿಗಳಲ್ಲಿ ವಿಶೇಷ ಚಿಹ್ನೆಗಳ ಎಲ್ಲಾ ಗ್ಲಿಫ಼್‌ಗಳನ್ನು ಸೇರಿಸುವುದು ಅನಿವಾರ್ಯವಾಗಿದೆ. ಅದರಲ್ಲಿ ಮುಖ್ಯವಾಗಿ ಇದೊಂದು ನುಕ್ತ ಚಿಹ್ನೆ. ಈ ತಿದ್ದುಪಡಿಗೆ ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು ರವರು ಜವಾಬ್ದಾರಿ. ಈ ಊನಗಳು ಹೊಸದಾಗಿ ಬಂದಿರುವ ೩೩ ಏಕರೂಪ ಲಿಪಿಗಳಲ್ಲಿಲ್ಲ. ###

ಟಿ.ದಿವಾಕರ

ಕನ್ನಡ ದೂರದರ್ಶಿ ವಾಹಿನಿಗಳ ಮಹಾ(ಮೆಗಾ) ಎಂಬ ಅಧಿಕಪ್ರಸಂಗೀ ಧಾರಾವಾಹಿಗಳು!?

October 21, 2015

ನನ್ನ ಪತ್ನಿ ಕಲರ್ಸ್‌ ಕನ್ನಡ(ಹಳೆಯ ಈಟಿವಿ ಕನ್ನಡ”) ಎಂಬ ಕನ್ನಡ ದೂರದರ್ಶಿ ವಾಹಿನಿಯಲ್ಲಿ ಬರುವ ಕೆಲವು ಧಾರಾವಾಹಿಗಳನ್ನು ನೋಡುವುದನ್ನು ಅಭ್ಯಾಸ ಮಾಡಿಕೊಂಡಿದ್ದುದರಿಂದ ಸಮಯ ಕಳೆಯಲೆಂದು ಜೊತೆಯಲ್ಲಿ ಕೂತು ನೋಡುವುದು ನನಗೂ ಸಹ ಅಭ್ಯಾಸವಾಗಿಬಿಟ್ಟಿತ್ತು..!

ಮುಖ್ಯವಾಗಿ ನೋಡುತ್ತಿದ್ದುದು ಕನ್ನಡದ ಮಹಾ ಬುದ್ಧಿವಂತ ನಿರ್ದೇಶಕನೆಂದು ನಾನು ನಂಬಿದ್ದ ಟಿ.ಎನ್‌. ಸೀತಾರಾಮ್‌ ನಿರ್ದೇಶನದ ಧಾರಾವಾಹಿಗಳನ್ನು.… “ಮಾಯಾಮೃಗ, ಜ್ವಾಲಾಮುಖಿ, ಮನ್ವಂತರ…” ಮೊದಮೊದಲಿನವು ನೋಡಲು ಬೇಸರವಾಗುತ್ತಿರಲಿಲ್ಲ. ಅವುಗಳು ಒಂದು ನಿರ್ಧಿಷ್ಟ ದಿಕ್ಕಿನಲ್ಲಿ ನಿರ್ಧಿಷ್ಟ ಗತಿಯಲ್ಲಿ ಚಲಿಸಿ ಮುಕ್ತಾಯವಾದಂಥ ಧಾರಾವಾಹಿಗಳು. ಆದರೆ ಆತ ಆನಂತರ ನಿರ್ದೇಶಿಸಿದ ಮುಕ್ತ; ಮುಕ್ತ ಮುಕ್ತ ಮತ್ತು ಮಹಾಪರ್ವಗಳೆಂಬ ಜಾಳು ಜಾಳಾಗಿ ನೇಯ್ದ ಹಳೆಯ ಬಟ್ಟೆಗಳಂತಹ ದಾರಾವಾಹಿಗಳು. “ಮಹಾಪರ್ವದಲ್ಲಿ ಯಾವುದೋ ಒಂದು ಕುಟುಂಬದ ಇಬ್ಬರು ಯುವತಿಯರ ಕಥೆಯನ್ನು ಹೇಳಲು ಹೊರಟು ಕೊನೆಗೆ ಒಬ್ಬ ದುಷ್ಟ ಅಪರಾಧಿಯ ಕಥೆಯನ್ನು ಹೇಳುತ್ತಾ ಅವನ ಸಾವಿನಲ್ಲಿ ಮುಕ್ತಾಯಗೊಳಿಸುವುದೊಂದು ವಿಪರ್ಯಾಸವೇ ಸರಿ. ಕಥೆ, ಚಿತ್ರಕಥೆ ಮತ್ತು ನಿರ್ದೇಶನ ಈ ಮೂರನ್ನೂ ನಿರ್ವಹಿಸುತ್ತಿದ್ದ ಸೀತಾರಾಮ್‌ರವರು ತಾನೆಲ್ಲಿ ಹೋಗುತ್ತಿದ್ದೇನೆಂಬುದನ್ನೇ ಮರೆತು ಕೊನೆಗೂ ಅವರ ಕಥೆಯನ್ನು ಮುಕ್ತಾಯಮಾಡಿದ್ದರು.

ಈ ದೂರದರ್ಶಿ ದಾರಾವಾಹಿಗಳು ಪ್ರಾರಂಬವಾಗುವುದಕ್ಕೆ ಮೊದಲು ಓದುಗರು ಸುಧಾ, ಪ್ರಜಾಮತ ಮತ್ತು ತರಂಗ ಸಾಪ್ತಾಹಿಕಗಳು ಮತ್ತು ಮಾಸಿಕಗಳಾದ ಮಯೂರ, ತುಷಾರ ಗಳಲ್ಲಿ ಬರುತ್ತಿದ್ದ ಕಥೆ, ನೀಳ್ಗಥೆಗಳು ಮತ್ತು ದಾರಾವಾಹಿಗಳನ್ನಲ್ಲದೆ ಇನ್ನಿತರೆ ಕಥೆ ಕಾದಂಬರಿ ಪುಸ್ತಕಗಳನ್ನು ಒದುತ್ತಿದ್ದರು. ಸರಕಾರಿ ದೂರದರ್ಶನ ವಾಹಿನಿಯು ಸಾಹಿತ್ಯದ ಸಣ್ಣಕಥೆ ಮತ್ತು ಕಾದಂಬರಿ ಆಧರಿಸಿ ಕಿರುತೆರೆಗೆ ಅಳವಡಿಸಿದ ದಾರಾವಾಹಿಗಳನ್ನು ಪ್ರಾರಂಬಿಸಿದನಂತರ ಓದುಗರು ಅವುಗಳನ್ನು ಓದುವುದನ್ನೇ ಮರೆತು ನೋಡಲು ಕುಳಿತರು. ಓದುವ ಅಭ್ಯಾಸ ಮರೆತೇ ಹೋಯಿತು. ಅದಿರಲಿ ಇದರಿಂದಾಗಿ ಕನ್ನಡದಲ್ಲೇಕೆ ಭಾರತೀಯ ಎಲ್ಲಾ ಭಾಷೆಗಳಿಗೆ ಅನ್ವಯಿಸಿ ದೂರದರ್ಶಿ ವಾಹಿನಿಗಳಿಗೆ ಬರೆಯುವ ಒಂದು ಹೊಸ ಪೀಳಿಗೆಯೇ ಸೃಷ್ಟಿಯಾಯಿತು. ಹಾಗೆಯೇ ಅವುಗಳ ನಿರೂಪಣೆ ಮತ್ತು ಚಲನೆ ಇದ್ದುದರಲ್ಲಿ ಪರವಾಗಿಲ್ಲ ಎಂಬಷ್ಟರ ಮಟ್ಟಿಗೆ ಸಮಂಜಸವಾಗಿರುತ್ತಿತ್ತು. ಸರಕಾರಿ ದೂರದರ್ಶನವು ಇವುಗಳಿಗಾಗಿ ಕೆಲವು ಷರತ್ತುಗಳನ್ನು ಹಾಕಿ ಇಂತಿಷ್ಟೇ ಅವಧಿಯಲ್ಲಿ ಇಂತಿಷ್ಟೇ ಕಂತುಗಳಲ್ಲಿ ಅವುಗಳು ಮುಗಿಯುವ ನಿಯಮಗಳಿಗೆ ಒಳಪಡಿಸುತ್ತಿತ್ತು. ಪ್ರೇಕ್ಷಕರು ಕೂಡ ಇಷ್ಟಪಟ್ಟು ಪಟ್ಟುಹಿಡಿದು ದೂರದರ್ಶನವೆಂಬ ಮಾಯಾ ಪೆಟ್ಟಿಗೆ ಮುಂದೆ ಕುಳಿತು ಅವುಗಳನ್ನು ನೋಡುತ್ತಿದ್ದರು. ಉದಾಹರಣೆಗೆ ಕನ್ನಡದ ಮಾಲ್ಗುಡಿ ದಿನಗಳು‘, ಹಿಂದಿಯ ಮಹಾ ಭಾರತ‘ “ರಾಮಾಯಣಮತ್ತು ಚಾಣಕ್ಯ‘.

ಖಾಸಗಿ ವಾಹಿನಿಗಳು ಪ್ರಾರಂಬವಾಗಿದ್ದೇ ತಡ ದುಡ್ಡು ಸುರಿದು ಕಳಪೆ ಸಾಮಗ್ರಿ ಒದಗಿಸಲು ತೊಡಗಿದರು ನಿರ್ಮಾಪಕರು ಮತ್ತು ನಿರ್ದೇಶಕರುಗಳು. ಮತ್ತು ಸರಕಾರಿ ದೂರದರ್ಶನದಿಂದ ಪ್ರೇಕ್ಷಕರನ್ನೂ ತಮ್ಮತ್ತ ಸೆಳೆದುಕೊಂಡರು. ಸಾರ್ವಜನಿಕ ಪ್ರೇಕ್ಷಕರು ಮಾಯಾಪೆಟ್ಟಿಗೆಯ ಖಾಸಗಿ ವಾಹಿನಿಗಳ ಮಾಯಾಜಾಲಕ್ಕೆ ಸಿಲುಕಿ ಅಲ್ಲಿಂದ ಹೊರಬರಲಾಗದೆ ನರಳುವಂತಾದರು. ಕ್ರಿಯೆಯೇ ಇಲ್ಲದೆ ನಿಷ್ಕ್ರಿಯವಾಗಿ ನಿಂತಲ್ಲೇ ನಿಂತು ಬರೀ ಒಣ ಸಂಭಾಷಣೆಗಳ ಅನವಶ್ಯಕ ದೃಶ್ಯಗಳ ಸರಕಾಗಿವೆ. ಏನನ್ನೋ ಹೇಳಲು ಹೋಗಿ ಇನ್ನೇನೋ ಹೇಳುವುದು?! ಹೀಗೆ ಮತ್ಯಾವ ಕಡೆಗೋ ತಿರುಗಿದ ಕಥೆಗಳು ಓಟವನ್ನು ಕಳೆದುಕೊಳ್ಳುವುದುಆಕಡೆ ಈಕಡೆ ಮುಗ್ಗುರಿಸುತ್ತಾ ಹಿಂದು ಮುಂದಾಗುವುದು, ಆಗಾಗಲೇ ಹೇಳಿದ ಕಥೆಯನ್ನೇ ಮತ್ತೊಂದು ಕೋನದಲ್ಲಿ ಚಿತ್ರೀಕರಿಸಿ ಹೇಳುವುದು ಸಾಮಾನ್ಯವಾಗಿ ಹೋಯಿತು. ಈ ರೀತಿ ಹಾವು ಏಣಿಯಾಟದಲ್ಲಿ ತೊಡಗಿದ ಕಥೆಗಳು ನಿಂತ ನೀರಾದವು. ಅಲ್ಲಿಯೇ ಕೊಳೆತು ನಾರುವ ಹೊಂಡಗಳಾದವು. ಬರಹಗಾರ ನಿರ್ದೇಶಕ ಮಹಾಶಯರುಗಳು ಈ ಬೆಳವಣಿಗೆಯನ್ನು ಮಹಾ(ಮೆಗಾ)’ ಎಂದು ಘೋಷಿಸಿ ಹೊಸ ಬಗೆಯ ದಾರವಾಹಿಗಳ ಉಗಮಕ್ಕೆ ನಾಂದಿಯನ್ನು ಹಾಡಿದರು. ಇವೆಲ್ಲದರ ಕಾರಣ ಪ್ರೇಕ್ಷಕರು ಒಳ್ಳೆಯ ಸಾಹಿತ್ಯ ಓದುವುದನ್ನು ಮರೆತರು, ಒಳ್ಳೆಯ ಕಿರುತೆರೆ ಕಥೆಗಳ ದಾರಾವಾಹಿಗಳನ್ನು ನೋಡುವ ಭಾಗ್ಯವನ್ನೂ ಕಳೆದುಕೊಂಡರು.

ಈಟಿವಿ ಕನ್ನಡವಾಹಿನಿಯು ಬೆಂಗಳೂರು ಹೊರತುಪಡಿಸಿ ಕರ್ನಾಟಕದ ಇತರ ಜಿಲ್ಲಾ ಕೇಂದ್ರಗಳಲ್ಲಿ ದಾರಾವಾಹಿಗಳ ಹೆಸರಲ್ಲಿ ಸಂವಾದಮತ್ತು ಸಂತೆಕಾರ್ಯಕ್ರಮಗಳನ್ನು ಏರ್ಪಡಿಸಿ ಕಥೆಗಳನ್ನು ಮತ್ತಷ್ಟು ತಿರುಚಿ ಅವುಗಳ ಚಲನೆ/ಗತಿಯನ್ನೇ ಬದಲಾಯಿಸುತ್ತಾ ಮುಕ್ತ ಮುಕ್ತಎಂಬ ದಾರಾವಾಹಿಯನ್ನು1500 ಕಂತುಗಳವರೆಗೆ ಮುಂದುವರಿಸಿದರು. ಕಡೆಗೆ ಪ್ರೇಕ್ಷಕರಿಗೆ ಸಮಾದಾನವನ್ನು ಹೇಳಿದ ನಿರ್ದೇಶಕಕಥೆಗಾರರು ಅದರ ಮುಕ್ತಾಯಕ್ಕೆ ಮಂಗಳ ಆಡಿದರು. ಬಹುಷಃ ಈ ಒಂದು ಕಾರಣಕ್ಕಾಗಿರಬಹುದು ಟಿ.ಎನ್‌.ಸೀತಾರಾಮ್‌ರವರು ಮಹಾ ಪರ್ವದ ನಂತರ ಈಟಿವಿ ಕನ್ನಡ” (ಈಗ ಕಲರ್ಸ್‌ ಕನ್ನಡ”) ದಲ್ಲಿ ಯಾವ ದಾರಾವಾಹಿಗಳ ಸೊಲ್ಲಿಲ್ಲದೆ ಮರೆಯಾಗಿದ್ದಾರೆ.

ಬರಹಗಾರರು, ನಿರ್ದೇಶಕರು ಮತ್ತು ನಿರ್ಮಾಪಕರುಗಳು ಮರೆಯದೆ ಅರ್ಥಮಾಡಿಕೊಳ್ಳಬೇಕು ಕಥೆಗಳಿಗೆ ಒಂದು ನಿರ್ದಿಷ್ಟ ಪ್ರಾರಂಬ, ಸಂಘರ್ಷ, ದಿಕ್ಕು, ಮಧ್ಯದಲ್ಲಿ ಒಂದಿಷ್ಟು ಸಂಘರ್ಷದ ಏರಿಳಿತಗಳು, ನಂತರ ಮುಕ್ತಾಯದೆಡೆಗೆ ಘಟನೆಗಳ ವಿವರಣೆ ಮತ್ತು ಅಂತಿಮವಾಗಿ ಒಂದು ನಿರ್ದಿಷ್ಟ ಮುಕ್ತಾಯ ಇರುತ್ತದೆಂಬುದನ್ನು! ನಿರ್ದೇಶಕನಾಗಲಿ ಚಿತ್ರಕಥೆಗಾರನಾಗಲಿ ಡಾನ್‌ ಬ್ರೌನ್‌ ನ ಕಾದಂಬರಿಗಳನ್ನಾಗಲಿ ಅಥವಾ ಹರ್ಮನ್‌ ಹೆಸ್‌ಸಿದ್ದಾರ್ಥಕಾದಂಬರಿಯನ್ನಾಗಲಿ ಓದುವುದು ಒಳಿತು; ಅಥವಾ ಸ್ಟಿವನ್‌ ಸ್ಪೀಲ್‌ಬರ್ಗ್‌ ಸಿನೆಮಾಗಳನ್ನಾಗಲಿ ನೋಡಿ ದೃಶ್ಯಮಾಧ್ಯಮದ ಮೂಲಕ ಕಥೆ ಹೇಳುವ ಕಲೆಯನ್ನು ಕಲಿಯಬೇಕು.

ನಾನು ಚಿಕ್ಕವನಿದ್ದಾಗ ನಮ್ಮೂರಿನ ಅಗಸರ ನರಸಪ್ಪ ಹೇಳುತ್ತಿದ್ದ ಜಾನಪದ ಕಥೆಗಳು ಕೇಳುಗರನ್ನು ಬೇರೊಂದು ಕನಸಿನ ಲೋಕಕ್ಕೇ ಕರೆದೊಯ್ಯುತ್ತಿದ್ದವು. ಕೇಳುಗರು ಆತನ ಕಥೆ ಹೇಳುವ ಮೋಡಿಗೇ ಒಳಗಾಗಿಬಿಡುತ್ತಿದ್ದರು. ಆತನಿಗೆ ಕಥೆ ಹೇಳುವ ಕಲೆ ಚೆನ್ನಾಗಿ ತಿಳಿದಿತ್ತುಅದೂ ಶ್ರವ್ಯ ಮಾಧ್ಯಮದ ಮೂಲಕ. ಈ ನಿಟ್ಟಿನಲ್ಲಿ ನಿರ್ಮಾಪಕರು, ನಿರ್ದೇಶಕರು ಮತ್ತು ಚಿತ್ರಕಥೆಗಾರರು ದೃಶ್ಯಶ್ರವ್ಯ ಮಾಧ್ಯಮಗಳಾದ ದೂರದರ್ಶಿ ವಾಹಿನಿಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವುದೊಳ್ಳೆಯದು.

ಈಟಿವಿ ಕನ್ನಡ‘ (ಈಗ ಕಲರ್ಸ್‌ ಕನ್ನಡ‘) ವಾಹಿನಿಯು ಪ್ರಸಾರಮಾಡುತ್ತಿರುವ ಲಕ್ಷ್ಮೀ ಬಾರಮ್ಮಮತ್ತು ಅಗ್ನಿ ಸಾಕ್ಷಿದಾರಾವಾಹಿಗಳನ್ನು ನೋಡುತ್ತಿದ್ದ ನಾನುನನ್ನ ಮಗಳು ಆ ಡಬ್ಬಾ ದಾರಾವಾಹಿಗಳನ್ನೇನು ನೋಡುತ್ತೀರ?!’ ಎಂದು ಬೈದರೂ ಬಿಡದೆ ನೋಡುತ್ತಿದ್ದಇಲ್ಲಿ ಅವುಗಳನ್ನು ಉದಹರಿಸುತ್ತಿದ್ದೇನೆ. ಇವುಗಳನ್ನು ಮುನ್ನಡೆಸುವಲ್ಲಿ ಚಿತ್ರಕಥೆಗಾರರು ಮತ್ತು ನಿರ್ದೇಶಕರು ಕಥೆಯನ್ನು ನೇರವಾಗಿ ಹೇಳದೆ ತಿರುಚುಮುರುಚು ಮಾಡಿ ಹಾಡಿದ್ದೇ ಹಾಡೋ ಕಿಸುಬಾಯಿ ದಾಸ…” ಎಂಬ ಗಾದೆ ಮಾತಿನ ಹಾಗೆ ಹೇಳಿದ್ದೇ ಹೇಳುತ್ತಾ ಪ್ರೇಕ್ಷಕರ ಸಹನೆ ತಿನ್ನುವ ಮೂಲಕ ಕಥೆ ಹೇಳುವ ಕಲೆಯನ್ನೇ ಕೊಂದುಹಾಕಿದ್ದಾರೆ. ಇವುಗಳನ್ನೇಕೆ ನೋಡುತ್ತಿದ್ದೆನು..? ಪ್ರಶ್ನೆಗೆ ನನ್ನ ಉತ್ತರ ಬಹುಷಃ ನಮ್ಮ ನಿರ್ಮಾಪಕರು ನಿರ್ದೇಶಕರು ದಾರಾವಾಹಿಗಳನ್ನು ಎಲ್ಲಿ..? ಹೇಗೆ..? ಎಷ್ಟು..? ಕಳಪೆಯಾಗಿ ಚಿತ್ರೀಕರಿಸಿ ಸಂಪಾದಿಸುತ್ತಿದ್ದಾರೆ ಎನ್ನುವುದನ್ನು ಅಭ್ಯಸಿಸುವುದಾಗಿತ್ತು. ನಾನೀಗ ಉತ್ತಮ ಕಥೆಗಳನ್ನು ಓದುವುದಕ್ಕಾಗಿಮಯೂರ, ತುಷಾರ ಮಾಸಿಕ; ಸುಧಾ, ತರಂಗ ಸಾಪ್ತಾಹಿಕಮತ್ತಿನ್ನಿತರ ಪುರವಣಿಗಳಲ್ಲಿ ಹುಡುಕುತ್ತಿದ್ದೇನೆ…!

ಟಿ.ದಿವಾಕರ

ಕನ್ನಡಕ್ಕಾಗಿ ವಿಂಡೋಸ್ ಎದುರು ಲಿನಕ್ಸ್ ಗಣಕ ನಿರ್ವಹಣಾ ತಂತ್ರಾಂಶ

November 30, 2014

ಕನ್ನಡಕ್ಕಾಗಿ ವಿಂಡೋಸ್ ಎದುರು ಲಿನಕ್ಸ್ ಗಣಕ ನಿರ್ವಹಣಾ ತಂತ್ರಾಂಶ

ಜೀವಶಾಸ್ತ್ರದಲ್ಲಿ ಪದವಿಪಡೆದ ಈ ಬ್ಲಾಗಿ ನಾಟಕ, ಪತ್ರಿಕೋಧ್ಯಮ ಎಂದು ತಲೆಕೆಡಿಸಿಕೊಂಡು ಓಡಾಡಿ ಕೊನೆಗೆ 1976ರಲ್ಲಿ ಸೇರಿದ್ದು ಕರ್ನಾಟಕ ಸರ್ಕಾರದ ಸಹಕಾರಿ ಇಲಾಖೆಯಲ್ಲಿ ನಿರೀಕ್ಷರ ಕೆಲಸಕ್ಕೆ. ಇಲಾಖೆಗೆ ಸೇರಿದಂತೆ ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಸಹಕಾರಿ ಆಢಳಿತ ತರಭೇತಿ ಸಂಸ್ಥೆಯಲ್ಲಿ ನೀಡಿದ ms-dos, wordstar ಮತ್ತೊಂದು lotus123 – graphic-presentation ಗಣಕೀಕರಣ ತರಭೇತು ಮಾತ್ರ. ಮತ್ತಿನ್ನಾವ ಅಧಿಕೃತ ಗಣಕಕೌಶಲ್ಯ ತರಭೇತಿ ಪಡೆಯಲಿಲ್ಲ, ಕೇವಲ ಗಣಕದ ಮುಂದೆ ಕುಳಿತು ಪ್ರಯತ್ನಅಪ್ರಯತ್ನಗಳ ಆಧಾರದಲ್ಲಿ windows ಮತ್ತು MS Office ತಂತ್ರಾಂಶದ ಒಳಹೊರಗನ್ನು ಕಲಿತದ್ದಾಯಿತು. ಹಾಗಾಗಿ ಅಂತರ್ಜಾಲ ಹುಡು/ಬೆದಕಾಟ, ವಿಟಪಾಲು ಇತ್ಯಾದಿಆದರೆ ವಿಷಯ ಅದಲ್ಲ..?!

ಇತ್ತೀಚೆಗೆ ಈ ಲೇಖಕ ಹಾಗೂ ಗಣಕ ಬಳಸುವ ಎಲ್ಲಾ ಕಂಪ್ಯೂಟರ್ ಗೀಕುಗಳಿಗೆ ಆದ ಒಂದು ದುಸ್ವಪ್ನವೆಂದರೆ ಮೈಕ್ರೊಸಾಫ್ಟ್ ಸಂಸ್ಥೆ windows-XP ನಿರ್ವಹಣಾ ತಂತ್ರಾಂಶ ಮತ್ತು MS Office 2003 ಇವುಗಳ ಸೇವಾಬೆಂಬಲವನ್ನು ಇದೇ ವರ್ಷದ ಏಪ್ರಿಲ್ 8ರಿಂದ ಹಿಂಪಡೆದುಕೊಂಡದ್ದು ಮತ್ತು ಬಳಕೆದಾರರಿಗೆ ಆನಂತರದ ನಿರ್ವಹಣಾ ತಂತ್ರಾಂಶ windows-7 ಮತ್ತು -8ಆಳವಡಿಸಿಕೊಳ್ಳಲು ಸೂಚಿಸಿದ್ದು! “ನುಡಿಕನ್ನಡ ತಂತ್ರಾಂಶವನ್ನು ಬಳಸುತ್ತಿದ್ದ ಲೇಖಕನಿಗೆ ಇದೊಂದು ಆಘಾತ! ಈ ಕಾರಣಕ್ಕೆ ಮೈಕ್ರೊಸಾಫ್ಟ್ ಸಂಸ್ಥೆಯ ಈ ಘನಕಾರ್ಯವನ್ನು ನಾವು ಅದರ “”ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಎಂದು ಕರೆಯೋಣವೆ ಎಂಬುದೊಂದು ಅಂಬೋಣ!? ಜಗತ್ತಿನ ಬಹುತೇಕ ಮಂದಿಗೆ ಗೊತ್ತಿಲ್ಲಬಿಲ್ ಗೇಟ್ಸ್, ಮೈಕ್ರೊಸಾಫ್ಟ್ ಒಡೆಯ MS-Office ಬರವಣಿಗೆ ತಂತ್ರಾಂಶದ mail merge, spell-check, grammer-check, ಮತ್ತು outline processing ತಂತ್ರಾಂಶಗಳನ್ನು ಸಣ್ಣಪುಟ್ಟ ಸಂಸ್ಥೆಗಳ ತಂತ್ರಜ್ಞರು ಸಿದ್ದಪಡಿಸಿದ್ದನ್ನು ಸಂಪೂರ್ಣವಾಗಿ ಹಕ್ಕುಗಳ ಸಹಿತ ಖರೀದಿಸಿ ಅವರನ್ನು ಅತಂತ್ರರನ್ನಾಗಿ ಮಾಡಿ ಮುಖ್ಯ ಚೌಕಟ್ಟಿನಿಂದ ಹೊರಹಾಕಿರುವುದು. ಈ ವಿಷಯವನ್ನು ಚಾರ್ಲಿ ಸ್ಟ್ರೊಸ್ ಎಂಬ ಕಾದಂಬರಿಕಾರ ಮೈಕ್ರೊಸಾಫ್ಟ್ ಸಂಸ್ಥೆಯ ವಿರುದ್ಧ ವಾಚಾಮಗೋಚರವಾಗಿ ಬೈದು ಬರೆದಿದ್ದಾನೆ ಆತನ ಬ್ಲಾಗಿನಲ್ಲಿ. ಯಾರಾದರೂ ಪರಿಶೀಲಿಸಬಹುದು “Why Mmicrosoft Word Must Die” ಎಂಬ ಬರಹದಲ್ಲಿ (URL: http://www.antipope.org/charlie/blog-static/2013/10/why-microsoft-word-must-die.html). ಅದಾಗ್ಯೂ ಆತ ತಾನೊಬ್ಬ ದೊಡ್ಡ ಸಾಮಾಜಿಕ ಪ್ರಜ್ಞೆ ಮತ್ತು ಕಳಕಳಿಯಿರುವ ವ್ಯಕ್ತಿಯೆಂದು ಬಿಂಬಿಸಿಕೊಳ್ಳುತ್ತಿರುವುದೊಂದು ಅಭಾಸದ ಸಂಗತಿ. ಇದೀಗ Windows Server 2003 ನ್ನು ಕೊಲ್ಲಲು ಅಣಿಯಾಗಿದೆ, ತಂತ್ರಾಂಶವನ್ನು ಉಪಯೋಗಿಸುತ್ತಿರುವ ಸಂಸ್ಥೆಗಳು Windows Server 2012 ನ್ನು ಅಳವಡಿಸಿಕೊಳ್ಳಲು ತಯಾರಿರಲು ಸೂಚನೆ ಬಂದಿದೆ – URL http://searchwindowsserver.techtarget.com/tip/Preparing-for-a-move-away-from-Windows-Server-2003?

ಬಹುತೇಕ ಮಂದಿ ಅವರ ಮನೆಗಳಲ್ಲಿ ಮತ್ತವರ ಪುಟ್ಟ ಕಛೇರಿಗಳಲ್ಲಿ windows-XP ಅಳವಡಿಸಿದ ಗಣಕಗಳನ್ನಿಟ್ಟುಕೊಂಡಿದ್ದಾರೆ. ಅವುಗಳಿಗೆ ಅಂತರ್ಜಾಲ ಸಂಪರ್ಕವನ್ನೂ ಪಡೆದುಕೊಂಡಿರುತ್ತಾರೆ. ಈ ಅಂತರ್ಜಾಲ ಸಂಪರ್ಕವೇ ಈ ಎಲ್ಲ ತಂತ್ರಾಂಶ ಬಳಕೆದಾರರಿಗೆ ಆಗಿರುವ ತಲೆನೋವು. ಈ ಲೇಖಕನ ಗಮನಕ್ಕೆ ಬಂದಹಾಗೆ ಈಗಾಗಲೇ ಅಲ್ಲಲ್ಲಿ ಗಣಕಗಳು ಸರಿಯಾಗಿ ಕಾರ್ಯನಿರ್ವಹಿಸದೆ ಮಗುಚಿಕೊಂಡುಬಿದ್ದಿವೆ. ಹೀಗಾದರೆ ಮುಂದೇನು..? ಕಾಲೋನ್ನತಿಗಳನ್ನು(updates) ಅಳವಡಿಸಿಕೊಳ್ಳಬೇಕು ಅಷ್ಟೆಅಂದರೆ windows-7 ಅಥವಾ -8. ಇದೊಂದು ರೀತಿಯಲ್ಲಿ ಮುಂದುವರಿದ ವ್ಯಾಪಾರ Microsoft ಸಂಸ್ಥೆಗೆ! ಅದರ ಈ ನರಿ ಬುದ್ಧಿಗಾಗಿ ಬ್ಲಾಗಿ ಅವರ ಗಣಕದಿಂದ Windows XP ನಿರ್ವಹಣಾ ತಂತ್ರಾಂಶವನ್ನು ಕಿತ್ತೊಗೆದಿದ್ದಾರೆ.

ಭಾರತ ಸರ್ಕಾರದ ಸ್ವಾಮ್ಯಕ್ಕೊಳಪಟ್ಟಿರುವ C-DAC ಸಂಸ್ಥೆ ಒಂದು ಗಣಕ ನಿರ್ವಹಣಾ ತಂತ್ರಾಂಶವನ್ನು ಬಿಡುಗಡೆ ಮಾಡಿದೆ. ಅದರ ಹೆಸರು BOSS. ಅವತರಣಿಕೆ BOSS-4 ಮತ್ತು -5; ಸಧ್ಯಕ್ಕೀಗ BOSS-5 ಚಾಲ್ತಿಯಲ್ಲಿದೆ. ಇವು ಲಿನಕ್ಸ್(Linux) ಆಧಾರಿತ ತಂತ್ರಾಂಶ. ಸಾಮಾನ್ಯ ಬಳಕೆದಾರರಿಗೆ ಈ ತಂತ್ರಾಂಶ ಬಳಕೆಯಲ್ಲಿಲ್ಲ. ಹಾಗಾಗಿ ಉಪಯೋಗಿಸುವುದು ಸ್ವಲ್ಪ ಕಷ್ಟ. ಸಾಮಾನ್ಯರೇಕೆ ಕರ್ನಾಟಕ ಸರ್ಕಾರದ ಕಛೇರಿಗಳಲ್ಲಿಯೇ ಬಳಸಲ್ಪಡುತ್ತಿಲ್ಲ. ಏಕೆಂದರೆ ನುಡಿಕನ್ನಡ ಗಣಕೀಕೃತ ಬೆರಳಚ್ಚು/ಬರವಣಿಗೆ ತಂತ್ರಾಶ ಮೂಲ windows ತಂತ್ರಾಂಶ ನಿರ್ವಹಣೆಗೊಳಪಟ್ಟಿದೆ. “ನುಡಿಲಿನಕ್ಸ್(Linux) ನಿರ್ವಹಣಾ ತಂತ್ರಾಂಶದಲ್ಲಿ ಅಳವಡಿಕೆಯಾಗಿ ಕಾರ್ಯನಿರ್ವಹಿಸುವುದಿಲ್ಲ. “ನುಡಿಕರ್ನಾಟಕ ಸರ್ಕಾರದ ತಂತ್ರಾಂಶ. ಸರ್ಕಾರದ ಸ್ವಾಭಿಮಾನಕ್ಕೆ ಲಿನಕ್ಸ್ ಬಳಸುವುದು ಅವಮಾನಕರವೇನೋ? ಹಾಗಾಗಿ ಕರ್ನಾಟಕ ಸರ್ಕಾರದ ನೌಕರರಿಗೆ ಅದಿನ್ನೂ ಅಭ್ಯಾಸಕ್ಕೆ ಬಂದಿಲ್ಲ. ಮತ್ತೊಂದು ಅಂಶವೆಂದರೆ ಈಗಾಗಲೇ ನುಡಿಬಳಸಿ ಸೃಷ್ಟಿಸಿರುವ ದಾಖಲೆಗಳನ್ನು ಹೊಸ ತಂತ್ರಾಂಶಕ್ಕೆ ವರ್ಗಾವಣೆ ಮಾಡಿಕೊಳ್ಳುವ ದುಸ್ಸಾಹಸ ಮತ್ತು ಅದಕ್ಕೆ ತಗಲುವ ದುಭಾರಿ ವೆಚ್ಚ. ಸರ್ಕಾರ ಯೋಚನೆಮಾಡಬೇಕಾದ ವಿಷಯ!

BOSS ಗಣಕ ನಿರ್ವಹಣ ತಂತ್ರಾಂಶದಲ್ಲಿ SCIM(Smart Common Input Method) ಎಂಬ ತಂತ್ರಾಂಶವನ್ನು ಅಳವಡಿಸಲಾಗಿದೆ. ಇದು ಚೀನೀಯರು ಅವರ ಭಾಷೆಯನ್ನು ಗಣಕದಲ್ಲಿ ಅಳವಡಿಸಲು ಸಿದ್ಧಪಡಿಸಿದ ಒಂದು ತಂತ್ರಾಂಶ. ಇದೀಗ ಆ ತಂತ್ರಾಂಶವನ್ನು ಏಶಿಯಾದ ಎಲ್ಲ ಭಾಷೆಗಳಿಗೂ ಅಳವಡಿಸಿಕೊಳ್ಳಬಹುದಾಗಿದೆ. ಅವಶ್ಯವಾಗಿ ಬೇಕಾಗಿರುವುದು ಯೂನಿಕೋಡ್ ಲಿಪಿ(font)ಗಳು ಮಾತ್ರ. BOSS-5ರಲ್ಲಿ ಲಭ್ಯವಿರುವ ಲಿಪಿಗಳೆಂದರೆ “”ಲೋಹಿತ್ ಕನ್ನಡ, ಕೇದಗೆ, ಗುಬ್ಬಿ, ಮಲ್ಲಿಗೆ, ನವಿಲು ಮತ್ತು ಸಂಪಿಗೆ; ಲೋಹಿತ್ ದೇವನಾಗರಿ ಮತ್ತು CDAC-GISTSakalBharati”, ಈ ಕೊನೆಯೆರಡು ಲಿಪಿಗಳಲ್ಲಿ ಭಾರತೀಯ ಎಲ್ಲಾ ಭಾಷೆಗಳಿಗೆ ಅನ್ವಯಿಸಿ ಲಿಪಿ ಸಿದ್ಧಪಡಿಸಿದೆ. ಆದರೆ ನುಡಿಲಿಪಿಗಳು ಈ SCIMತಂತ್ರಾಂಶದಲ್ಲಿ ಕಾರ್ಯನಿರ್ವಹಿಸುವುದಿಲ್ಲ. BOSSನ ನ್ಯೂನತೆಯೆಂದರೆ ಅದರ SCIMನಲ್ಲಿ ಅಳವಡಿಸಿರುವ ಎರಡು ಕನ್ನಡದ ಕೀಲಿಮಣೆಗಳಲ್ಲೊಂದು KGP, ಇದು ಕಾಗುಣಿತಗಳನ್ನು ತೆಗೆದುಕೊಳ್ಳುವುದಿಲ್ಲ ಕೇವಲ ಒತ್ತಕ್ಷರಗಳನ್ನು ಮಾತ್ರ ತೆಗೆದುಕೊಳ್ಳುತ್ತದೆ. ಆದುದರಿಂದ ಅದು ಉಪಯೋಗವಿಲ್ಲ. ಇನ್ನೊಂದು inscript, ಇದು ಪೂರ್ಣ ಕಾರ್ಯನಿರವಹಿಸುತ್ತದೆ. ಆದರೆ ಕೀಲಿಮಣೆಯ ಬಹುತೇಕ ಎಲ್ಲಾ ಕೀಲಿಗಳಿಗೂ ಅನ್ವಯಿಸುವ ಹಾಗೆ ಕನ್ನಡದ ಕೀಲಿಮಣೆ ಸಿದ್ಧಪಡಿಸಿದ್ದಾರೆ. “ನುಡಿಯಷ್ಟು ಬೆರಳಚ್ಚು ಸ್ನೇಹಿಯಲ್ಲ; ಇದರ ಕೀಲಿಮಣೆ ಉಪಯೋಗಿಸುವುದು ನುಡಿಬಳಸಿದವರಿಗೆ ಕಷ್ಟವೇ ಸರಿ. ಹಾಗಾಗಿ ಲೇಖಕ ನುಡಿಕೀಲಿಮಣೆ ಆಧರಿಸಿ ಕನ್ನಡ ಅಂಕಿ ಮತ್ತು ಇಂಗ್ಲೀಷ್ ಅಂಕಿಗಳಿಗಾಗಿ ಪ್ರತ್ಯೇಕವಾಗಿ ಒಂದೊಂದು SCIM ಕೀಲಿಮಣೆಗಳನ್ನು ಸಿದ್ಧಪಡಿಸಿದ್ದಾರೆ. (ಹೊಸದಾಗಿ ಸಿದ್ಧಪಡಿಸಿರುವ ಎರಡೂ ಕೀಲಿಮಣೆಗಳನ್ನು ಕನ್ನಡಿಗರಿಗಾಗಿ SCIMತಂತ್ರಾಂಶದ ಉಪಯೋಗಕ್ಕಾಗಿ ಸಧ್ಯದಲ್ಲಿಯೇ ಅಂತರ್ಜಾಲ ಪುಟಗಳಿಗೆ ತುಂಬಲಾಗುವುದು). ಯಾಕೋ ಏನೋ C-DACನವರು ಇನ್ನೊಂದು ಕೀಲಿಮಣೆ ಬಳಸಿಲ್ಲ. ಅದರ ಹೆಸರು itrans (in transliteration), ಇದು ನಮ್ಮ ಕನ್ನಡದ ಬರಹಕ್ಕೆ ಸಮನಾಗಿದೆ, ಇಂಗ್ಲಿಷಿನಲ್ಲಿ ಕೀಲಿಸಿದರೆ ಕನ್ನಡದಲ್ಲಿ ರೂಪಾಂತರವಾಗಿ ನಿಮ್ಮ ಬರವಣಿಗೆ ಅಚ್ಚಾಗುತ್ತದೆ, ಇದೊಂದು ಸ್ವರೋತ್ಪತ್ತಿ(Phonetics) ಆಧಾರದ m17n ತಂತ್ರಾಂಶವಾಗಿದೆ. ಬಹುಷಃ ಬರಹವನ್ನು m17n ತಂತ್ರಾಂಶ ಆಧರಿಸಿ ಸಿದ್ಧಪಡಿಸಿರಬಹುದು! ಭಾರತದ ಇತರೆ ಭಾಷೆಗಳಿಗಾಗಿಯೆ ಅಂದರೆತಮಿಳು, ತೆಲುಗು, ಮಲಯಾಳಂ, ಹಿಂದಿ, ಗುಜರಾತಿ, ಬಂಗಾಲಿ ಮತ್ತಿತರ ಭಾಷೆಗಳಿಗನುಕೂಲಕ್ಕಾಗಿ BOSSನಲ್ಲಿ ಆಯಾ ಲಿಪಿಗಳನ್ನು ಮತ್ತು SCIM ಕೀಲಿಮಣೆಗಳನ್ನು ಅಳವಡಿಸಲಾಗಿದೆ. SCIM ಮೂಲಕ ನೇರನುಡಿರೀತ್ಯ LibreOffice Writer ಮತ್ತು .txt ಕಡತಗಳ ಮೇಲೆ ಬೆರಳಚ್ಚಿಸಬಹುದು. Windowsನಲ್ಲಿ ನೇರನುಡಿ‘ .txt ಕಡತದ ಮೇಲೆ ಅದರ ಕೀಲಿಮಣೆಗನುಗುಣವಾಗಿ ಕನ್ನಡ ಅಕ್ಷರಗಳನ್ನು ಮುದ್ರಿಸುವುದಿಲ್ಲ, ಕಾರಣ ನುಡಿಲಿಪಿಗಳಲ್ಲಿ ಮಾಡಿರುವ ಸಂಕೇತೀಕರಣ(coding) ತಪ್ಪುಗಳು. ಯಾರು ಬೇಕಾದರೂ

BOSS-5 ನ್ನು C-DAC ಜಾಲತಾಣದಿಂದ ಕೆಳಗಿಳಿಸಿಕೊಳ್ಳಬಹುದು. ಈ ನಿರ್ವಹಣಾ ತಂತ್ರಾಂಶವನ್ನು ಅಳವಡಿಸಿದನಂತರ ಕಾಲೋನ್ನತಿಗಳನ್ನು(updates) ಅಳವಡಿಸುವುದು ಒಳ್ಳೆಯದು. ಇಲ್ಲದಿದ್ದಲ್ಲಿ ಕನ್ನಡ ಲಿಪಿಗಳು ಸರಿಯಾಗಿ ಮುದ್ರಿತವಾಗುವುದಿಲ್ಲ.

ಕನ್ನಡ ಯೂನಿಕೋಡ್ ಲಿಪಿಗಳ ಬಗ್ಗೆ(ನುಡಿ ಲಿಪಿಗಳು ಹೊರತುಪಡಿಸಿ) ಒಂದು ಮಾತು:

ಕೇದಗೆ ಮತ್ತು ಗುಬ್ಬಿ ಲಿಪಿಗಳು ಪುಸ್ತಕ ಪ್ರಕಾಶಕರಿಗೆ ಅನುಕೂಲವಾಗುವಂತಹ ಸುಂದರವಾದ ಲಿಪಿಗಳು. ಗುಬ್ಬಿ, ಸಂಪಿಗೆ ಮತ್ತು ನವಿಲು ಲಿಪಿಗಳಲ್ಲಿ ಮಾತ್ರ ನಂಟುಗೆರೆ(hypen) “-‘ ಇದೆ, ನುಕ್ತ ಚಿಹ್ನೆ ಇಲ್ಲ. “ಕೇದಗೆಮತ್ತು ಮಲ್ಲಿಗೆಯಲ್ಲಿ ಈ ಎರಡೂ ಚಹ್ನೆಗಳೂ ಇಲ್ಲ. “ಲೋಹಿತ್ ಕನ್ನಡದಲ್ಲಿ ಮಾತ್ರ ಈ ಎರಡೂ ಚಿಹ್ನೆಗಳಿವೆ. ಈ ನುಕ್ತ ಏಕೆ ಬೇಕು? ಇದು ಅಕ್ಷರದ Z ಶಬ್ಧೋತ್ಪತ್ತಿಗಾಗಿ ಬೇಕಿದೆ. ಉದಾ: vision ಎಂಬ ಇಂಗ್ಲೀಷ್ ಪದವನ್ನು ಕನ್ನಡದಲ್ಲಿ ಬರೆಯುವಾಗ್ಗೆ ತಪ್ಪಾಗಿ ವಿಷನ್ ಅಥವಾ ವಿಜನ್ ಎಂದು ಬರೆಯುತ್ತಾರೆ. ಇಲ್ಲಿ Z ಶಬ್ಧೋತ್ಪತ್ತಿಯಾಗುವುದಿಲ್ಲ. ಹಾಗಾಗಿ ಈ ನುಕ್ತ ಚಿಹ್ನೆ ಅವಶ್ಯವಾಗಿ ಬೇಕಿಲ್ಲಿ – ಈಗ ಉಚ್ಛರಿಸಿರಿ ವಿಜ಼ನ್ ಎಂದು. “ಲೋಹಿತ್ ಕನ್ನಡಹೊರತು ಯಾವುದೇ ಲಿಪಿಯನ್ನು ಈ ನುಕ್ತ ಚಿಹ್ನೆ ತೆಗೆದುಕೊಳ್ಳುವುದಿಲ್ಲ. ಇಲ್ಲಿಯೂ ಸಹ ಬಳಸಿದ್ದು ಕೇದಗೆ ಲಿಪಿಯನ್ನೆ, ಆದರೆ ಅದು ಇಲ್ಲಿಯೂ ಬೆರಳಚ್ಚಿನಲ್ಲಿ ತೆಗೆದುಕೊಂಡಿದ್ದು ಜ಼ “ಲೋಹಿತ್ ಕನ್ನಡ’ ಲಿಪಿಯನ್ನೆ. ಉಳಿತಾಯ ಮಾಡುವಾಗ್ಗೆ ಕೇದಗೆ ಲಿಪಿಯಲ್ಲಿಯೇ ಉಳಿದಿದೆ. ಕೇದಗೆ ಲಿಪಿಗಳ ಮಧ್ಯೆ ಈ ಪ್ರತ್ಯೇಕ “ಲೋಹಿತ್ ಕನ್ನಡ’ ಲಿಪಿ ಮುದ್ರಣದಲ್ಲಿ ಅಭಾಸವಾಗಿ ಕಾಣುತ್ತದೆ. ಹಾಗಾಗಿ ಲೇಖಕ ಕೇದಗೆ ಮತ್ತು ಗುಬ್ಬಿ ಲಿಪಿಗಳಿಗೆ ನುಕ್ತ ಚಿಹ್ನೆಯನ್ನು ಸೇರಿಸಿಕೊಂಡಿದ್ದಾರೆ. “ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರುರವರು GNU General Public Licence (URL: http://www.gnu.org/copyleft/gpl.html) ಅಡಿಯಲ್ಲಿ ಈ ಲಿಪಿಗಳನ್ನು ಸಿದ್ಧಪಡಿಸಿದ್ದಾರೆ. ಹಕ್ಕುಗಳು ಅವರದೇ ಆಗಿರುತ್ತದೆ.

ಕೊನೆಯದಾಗಿ ಒಂದು ಕಿವಿಮಾತು windows ನಿರ್ವಹಣಾ ತಂತ್ರಾಂಶ ಇಷ್ಟಪಡದೇ ಇರುವವರು BOSS-5 ಮತ್ತು ಹೊಸದಾಗಿ ಬಂದಿರುವ openSUSE 13.2 ಲಿನಕ್ಸ್ ನಿರ್ವಹಣಾ ತಂತ್ರಾಂಶಗಳನ್ನು ಅಳವಡಿಸಿಕೊಳ್ಳಬಹುದು. ಎರಡೂ ಅದ್ಭುತ ತಂತ್ರಾಂಶಗಳು. ಎರಡನ್ನೂ ಸಹ ಉಚಿತವಾಗಿ ಅವುಗಳ ಜಾಲತಾಣದಿಂದ ಕೆಳಗಿಳಿಸಿಕೊಳ್ಳಬಹುದು. openSUSE ಯಲ್ಲಿ ಕನ್ನಡ ಲಿಪಿಗಳು ಇರುವುದಿಲ್ಲ. SCIM ತಂತ್ರಾಂಶವನ್ನುಅಳವಡಿಸಿದನಂತರ ಕನ್ನಡ ಲಿಪಿಗಳನ್ನು BOSS-5 ರಿಂದ ನಕಲುಮಾಡಿ ಅಳವಡಿಸಿಕೊಳ್ಳಬಹುದು, GNU General Public Licence ಅಡಿಯಲ್ಲಿ ಆ ಅವಕಾಶವಿದೆ. ಅಥವಾ windows ಇದ್ದಲ್ಲಿ ಅದರಲ್ಲಿನ Arial Unicode MS[ARIALUNI.TTF] ಬಹುಭಾಷ ಲಿಪಿ ಮತ್ತು Tunga.ttf ಕನ್ನಡ ಲಿಪಿ ಬಳಸಿಕೊಳ್ಳಬಹುದು. “ತುಂಗಾಲಿಪಿ ಅಷ್ಟು ಚೆನ್ನಾಗಿಲ್ಲ ಮತ್ತು ಈ ನುಕ್ತ ಚಿಹ್ನೆ ಎರಡು ಲಿಪಿಗಳಲ್ಲಿಯೂ ಇಲ್ಲ. ಆದರೆ ಕಾನೂನು ರೀತ್ಯ ನಕಲುಮಾಡಿ ಬಳಸುವ ಅವಕಾಶ ಪರಿಶೀಲಿಸುವುದುತ್ತಮ. ಹಕ್ಕುಗಳು ಪೂರ್ಣವಾಗಿ ಮೈಕ್ರೊಸಾಫ್ಟ್ ಸಂಸ್ಥೆಗೆ ಒಳಪಟ್ಟಿದೆ. ###

ಟಿ.ದಿವಾಕರ

feedback: tdivakara@gmail.com